ಸ್ಫೋರ್ಟ್ಸ್ ಪ್ರೊ ಪ್ರಕಟಿಸಿರುವ ಸಮೀಕ್ಷಾ ವರದಿಯಲ್ಲಿ ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಖ್ಯಾತ ಫುಟ್ಬಾಲ್ ಆಟಗಾರ ಲಯೋನೆಲ್ ಮೆಸ್ಸಿ ಮತ್ತು ಟೆನ್ನಿಸ್ ಸ್ಟಾರ್ ಜೋಕೋವಿಕ್‌ಗಿಂತ ಹೆಚ್ಚು ಮಾರುಕಟ್ಟೆ ಹೊಂದಿರುವ ಆಟಗಾರರಾಗಿದ್ದಾರೆ.ಕೊಹ್ಲಿ ಪ್ರಸಕ್ತ ಎನ್‌ಬಿಎ ಸ್ಟೀಫನ್ ಕರಿ ಮತ್ತು ಫ್ರಾನ್ಸ್ ಫುಟ್ಬಾಲ್ ಆಟಗಾರ ಪಾಲ್ ಪೊಗ್ಮಾಗಿಂತ ಹಿಂದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಜೋಕೋವಿಕ್ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದು, ಮೆಸ್ಸಿ 27ನೇ ಸ್ಥಾನದಲ್ಲಿ ಮತ್ತು ಜಮೈಕಾದ ಓಟಗಾರ ಉಸೇನ್ ಬೋಲ್ಟ್ 31 ನೇ ಸ್ಥಾನದಲ್ಲಿದ್ದಾರೆ. ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಟಾಪ್ 50ರ ಪಟ್ಟಿಯಲ್ಲಿದ್ದಾರೆ.
ಸ್ಫೋರ್ಟ್ ಪ್ರೊ ಕ್ರೀಡಾ ಬಿಸಿನೆಸ್ ಕುರಿತು ವ್ಯಾಪಕ ಸಂಶೋಧನೆ ನಡೆಸುತ್ತದೆ. ಈ ಬೇಸಿಗೆಯಿಂದ ಮೂರುವರ್ಷಗಳ ಕಾಲ ಆಟಗಾರನ ಮಾರುಕಟ್ಟೆ ಸಾಮರ್ಥ್ಯದ ಆಧಾರದ ಮೇಲೆ ಅಥ್ಲೀಟ್‌ಗಳಿಗೆ ಶ್ರೇಣೀಕರಣ ನೀಡುವ ಮಾನದಂಡ ಅನುಸರಿಸುತ್ತದೆ.