ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ತಮ್ಮ 10,000ನೇ ಟೆಸ್ಟ್ ರನ್ ದಾಖಲೆ ಮುಗಿಸುವುದಕ್ಕೆ ಇನ್ನೂ ಕಾಯುತ್ತಿದ್ದು, ಮಹತ್ವದ ಮೈಲಿಗಲ್ಲು ಮುಟ್ಟಲು ಇನ್ನೂ 5 ರನ್ ಕೊರತೆ ಅನುಭವಿಸಿದ್ದಾರೆ.
ಎಡಗೈ ಓಪನರ್ 10,000 ರನ್ ಪೂರೈಸಿದ 12ನೇ ಆಟಗಾರ ಮತ್ತು ಮೊದಲ ಇಂಗ್ಲಿಷ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು 20 ರನ್ ಅಗತ್ಯವಿತ್ತು. 10,000 ರನ್ ಪೂರೈಸಿದ ಅತೀ ಕಿರಿಯ ಆಟಗಾರ ಎಂಬ ಸಚಿನ್ ದಾಖಲೆಯನ್ನು ಮುರಿಯುವುದರಿಂದ ಕುಕ್ ಮಿಸ್ ಆಗಿದ್ದಾರೆ.
ಆದರೆ 15 ರನ್ ಸ್ಕೋರ್ ಮಾಡುವಷ್ಟರಲ್ಲಿ ಔಟಾಗಿದ್ದರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಎರಡನೇ ಸ್ಲಿಪ್‌ನಲ್ಲಿ ದಿಮುತ್ ಕರುಣಾರತ್ನೆ ಡೈವ್ ಹೊಡೆದು ಕುಕ್ ಕ್ಯಾಚ್ ಹಿಡಿದಿದ್ದರು.
31 ವರ್ಷ 154 ದಿನಗಳ ಕುಕ್ ಈ ಸಾಧನೆಯನ್ನು ಮುಂದಿನ ಎರಡು ದಿನಗಳಲ್ಲಿ ಮಾಡಿದರೆ 10000 ಟೆಸ್ಟ್ ರನ್ ಪೂರೈಸಿದ ಸರ್ವಕಾಲಿಕ ಅತೀ ಕಿರಿಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 31 ವರ್ಷ ಮತ್ತು 326 ದಿನಗಳಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.