ಲೆಜೆಂಡ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾರತದ ನಂ.1 ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಯಶಸ್ಸಿನ ಗುಟ್ಟ ಸ್ಟ್ರೈಟ್ ಬ್ಯಾಟ್‌ನಿಂದ ಆಡುವುದಾಗಿದೆ ಎಂದು ಹೇಳಿದ್ದಾರೆ. ತಮ್ಮ ತಂತ್ರದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೇ ಎಲ್ಲ ಮಾದರಿ ಆಟಗಳ ಬಗ್ಗೆ ಮುಂದಾಲೋಚನೆ ಮಾಡುವುದು ಕೊಹ್ಲಿಯ ಕೌಶಲ್ಯವಾಗಿದೆ ಎಂದು ಸಚಿನ್ ಹೇಳಿದರು.
ವಿರಾಟ್ ಬ್ಯಾಟನ್ನು ನೇರವಾಗಿ ಇರಿಸಿ ಉತ್ತಮ ಕ್ರಿಕೆಟ್ ಶಾಟ್‌ಗಳನ್ನು ಆಡುತ್ತಾರೆ. ಅವರದ್ದು ವಿಶೇಷ ಪ್ರತಿಭೆಯಾಗಿದ್ದು, ತಮ್ಮ ಆಟದ ಬಗ್ಗೆ ಶ್ರಮ ಪಡುತ್ತಾರೆ. ಅವರ ಶಿಸ್ತು ಮತ್ತು ಬದ್ಧತೆಯನ್ನು ಅನುಕರಿಸಬೇಕಾಗಿದೆ. ಇದಲ್ಲದೇ ಮಾನಸಿಕವಾಗಿ ತುಂಬಾ ಸದೃಢರಾಗಿದ್ದು, ಒತ್ತಡದ ಪರಿಸ್ಥಿತಿಗಳಲ್ಲಿ ಪ್ರವರ್ಧಿಸುತ್ತಾರೆ ಎಂದು ತೆಂಡೂಲ್ಕರ್ ಗಲ್ಫ್ ನ್ಯೂಸ್ ಸಂದರ್ಶನದಲ್ಲಿ ಹೇಳಿದರು.
ಐಪಿಎಲ್‌ನಲ್ಲಿ ಸ್ಪರ್ಧೆಯ ಮಟ್ಟವು ಸ್ಥಿರವಾಗಿ ಬೆಳೆಯುತ್ತಿದೆ. ಆಸಕ್ತಿಯ ಮಟ್ಟವನ್ನು ಉದ್ದಕ್ಕೂ ಕಾಯ್ದುಕೊಳ್ಳುವುದರಿಂದ ಇದು ಪಂದ್ಯಾವಳಿಗೆ ಮಹತ್ವದ್ದಾಗಿದೆ ಎಂದು ಹೇಳಿದರು.