ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ. ಕೊಹ್ಲಿ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.
ವಿರಾಟ್ ಕೊಹ್ಲಿ ಟ್ಯಾಟೂ ಪ್ರಿಯ. ಅವರ ಕೈಯಲ್ಲಿ ಕೆಲವು ವಿಶೇಷ ಟ್ಯಾಟೂಗಳಿವೆ. ಒಂದಕ್ಕಿಂತ ಹೆಚ್ಚು ಟ್ಯಾಟೂ ಹಾಕಿಕೊಂಡಿರುವ ಕೊಹ್ಲಿ ಮೊದಲು ಟ್ಯಾಟೂ ಹಾಕಿಸಿಕೊಂಡಿದ್ದು ಬೆಂಗಳೂರಿನಲ್ಲಿಯೇ ಅಂತೆ. ಇದನ್ನು ಅವರೇ ಒಂದು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮೊದಲು ನಾನು ಟ್ಯಾಟೂ ಹಾಕಿದ್ದು ಬೆಂಗಳೂರಿನಲ್ಲಿ. ಅದು 2007 ರಲ್ಲಿ. ಎಂಜಿ ರೋಡ್ ಕಡೆ ಹೋಗ್ತಿದ್ದಾಗ ಒಂದು ಟ್ಯಾಟೂ ಅಂಗಡಿ ಸಿಕ್ತು. ಅದನ್ನು ನೋಡಿ ಎಲ್ಲರಂತೆ ನಾನೂ ಟ್ಯಾಟೂ ಹಾಕಿಸಿಕೊಳ್ಳೋಣವೆಂದು ಒಳಗೆ ಹೋದೆ.
ಅವರು ಏನೋ ಒಂದು ವಿಚಿತ್ರ ಟ್ಯಾಟೂ ಹಾಕಿದರು. ಅದರಲ್ಲಿ ಎಫ್ ಎಂದೂ ಬರೆದಿದ್ದರು. ಅದನ್ನು ನೋಡಿ ನಾನು ಅದೇನೆಂದು ಕೇಳಿದಾಗ ಅದೇನೋ ಅರ್ಥ ಹೇಳಿದರು. ಆದರೆ ಅದಕ್ಕೆ ನಿಜವಾಗಿ ಏನೂ ಅರ್ಥವಿರಲಿಲ್ಲ. ಅದೊಂದು ಕೆಟ್ಟ ಟ್ಯಾಟೂ ಆಗಿತ್ತು.
ಕೆಲವು ಸಮಯದ ನಂತರ ನನಗೆ ಇದು ತಿಳಿದು ಕೊನೆಗೆ ಯಾರೂ ನೋಡೋದು ಬೇಡ ಎಂದು ಮುಚ್ಚಿಕೊಂಡು ಓಡಾಡುತ್ತಿದ್ದೆ. ಆದರೆ ನನ್ನ ಟ್ಯಾಟೂ ನೋಡಿ ಅಭಿಮಾನಿಗಳು ಅದನ್ನೇ ಹಾಕಿಕೊಂಡಿದ್ದರು. ಅವರಿಗೆಲ್ಲಾ ನಾನು ಕೆಟ್ಟ ಮಾದರಿಯಾದೆ ಎಂದು ಕೊಹ್ಲಿ ಹೇಳಿದ್ದರು. ಆದರೆ ನಂತರ ಅವರು ಸುಮಾರು 12 ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ಅದಕ್ಕೆಲ್ಲಾ ಒಂದೊಂದು ಅರ್ಥವಿದೆಯಂತೆ.