ಮುಂಬೈ: ಸ್ಟಾರ್ ಕಪಲ್ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ತಮ್ಮ ಬಾಡಿಗಾರ್ಡ್ ಗೆ ನೀಡುವ ವೇತನ ಕೇಳಿದರೆ ನೀವು ಹೌಹಾರುತ್ತೀರಿ. ಯಾಕೆಂದರೆ ಇವರಿಗೆ ಸ್ಟಾರ್ ದಂಪತಿ ನೀಡುವ ವೇತನ ಅಷ್ಟೊಂದು ದುಬಾರಿ.
ಆಂಗ್ಲ ವಾಹಿನಿಯೊಂದರ ಪ್ರಕಾರ ವಿರಾಟ್ ದಂಪತಿ ತಮ್ಮ ಬಾಡಿ ಗಾರ್ಡ್ ಆಗಿರುವ ಪ್ರಕಾಶ್ ಸಿಂಗ್ ಗೆ ವಾರ್ಷಿಕ ಬರೋಬ್ಬರಿ 1.2 ಕೋಟಿ ರೂ. ವೇತನ ನೀಡುತ್ತಾರಂತೆ!
ಇಬ್ಬರೂ ಹೋದಲೆಲ್ಲಾ ಅಭಿಮಾನಿಗಳು, ಮಾಧ್ಯಮಗಳು ಮುತ್ತಿಕ್ಕುತ್ತಾರೆ. ಹೀಗಿರುವಾಗ ಈ ಹೈ ಪ್ರೊಫೈಲ್ ದಂಪತಿಯ ರಕ್ಷಣೆಯ ಸಂಪೂರ್ಣ ಹೊಣೆ ಇವರದ್ದಾಗಿರುತ್ತದೆ. ಹೀಗಾಗಿ ತಮ್ಮ ಆಪ್ತನನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ ವಿರುಷ್ಕಾ.