Select Your Language

Notifications

webdunia
webdunia
webdunia
webdunia

ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್

ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್
ಮುಂಬೈ , ಭಾನುವಾರ, 11 ಜುಲೈ 2021 (10:07 IST)
ಮುಂಬೈ: ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ಖುಷಿಯ ವಿಚಾರವನ್ನು ಸ್ವತಃ ಭಜಿ ಟ್ವೀಟ್ ಮಾಡಿದ್ದಾರೆ.


ನಮಗೆ ಗಂಡು ಮಗುವಾಗಿದೆ ಎಂದು ಖುಷಿಯಿಂದಲೇ ಭಜಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಈ ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಇದು ಎರಡನೇ ಮಗುವಾಗಿದೆ.

ಇತ್ತೀಚೆಗಷ್ಟೇ 42 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜಿ ಈಗ ವೈಯಕ್ತಿಕ ಜೀವನದ ಖುಷಿಯಲ್ಲಿದ್ದಾರೆ. ಹರ್ಭಜನ್ ಮತ್ತು ನಟಿ ಗೀತಾ ಬಸ್ರಾ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಸರಣಿ ಪರಿಷ್ಕೃತ ವೇಳಾಪಟ್ಟಿ ತಿಳಿಸಿದ ಗಂಗೂಲಿ