Publish Date: Thu, 12 Apr 2018 (09:14 IST)
Updated Date: Thu, 12 Apr 2018 (09:17 IST)
ಚೆನ್ನೈ: ಕನ್ನಡಿಗ ಕ್ರಿಕೆಟಿಗ ವಿನಯ್ ಕುಮಾರ್ ಸದ್ಯಕ್ಕೆ ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದು ಅವರು ದುಬಾರಿ ಬೌಲರ್ ಆಗಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಗೇಲಿಗೊಳಗಾಗಿದ್ದಾರೆ.
ಕೆಲವರು ಅವರನ್ನು ರಾಹುಲ್ ಗಾಂಧಿಗೆ ಹೋಲಿಸಿದರೆ ಇನ್ನು ಕೆಲವರು ಇಶಾಂತ್ ಶರ್ಮಾರಿಗೆ ಹೋಲಿಸಿ ಗೇಲಿ ಮಾಡಿದ್ದಾರೆ. ವಿನಯ್ ಕುಮಾರ್ ಎಂದರೆ ವಿರೋಧಿಗಳಿಗೆ ಪಂದ್ಯ ಗೆಲ್ಲಿಸಿಕೊಡುವ ಆಟಗಾರ ಎಂದು ಹಲವರು ಲೇವಡಿ ಮಾಡಿದ್ದಾರೆ.
ಕಳೆದ ಎರಡೂ ಪಂದ್ಯಗಳಲ್ಲಿ ವಿನಯ್ ಕುಮಾರ್ ಎದುರಾಳಿಗಳಿಗೆ ವಿಪರೀತ ರನ್ ಬಿಟ್ಟುಕೊಟ್ಟಿದದ್ದರು. ಇದೇ ಕಾರಣಕ್ಕೆ ಅವರನ್ನು ತಮಾಷೆ ಮಾಡಲಾಗಿದೆ. ಒಬ್ಬರಂತೂ ಚೆನ್ನೈ ಆಟಗಾರರಿಂದ ಚಚ್ಚಿಸಿಕೊಂಡ ವಿನಯ್ ಅತ್ತರು. ಅಂತೂ ತಮಿಳುನಾಡಿಗೆ ಕರ್ನಾಟಕದಿಂದ ಕಾವೇರಿ ನೀರು ಬಂತು ಎಂದು ತಮಾಷೆ ಮಾಡಿದ್ದಾರೆ.
ಟ್ವಿಟರ್ ನಲ್ಲಿ ತಮ್ಮನ್ನು ಈ ಮಟ್ಟಿಗೆ ಗೇಲಿ ಮಾಡಿರುವುದಕ್ಕೆ ಸ್ವತಃ ವಿನಯ್ ಕುಮಾರ್ ತಿರುಗೇಟು ನೀಡಿದ್ದಾರೆ. ‘ಟೇಕ್ ಇಟ್ ಈಸಿ. ಇದು ಆಟವಷ್ಟೇ. ನಾನು ಆರ್ ಸಿಬಿ ಎದುರು 9 ರನ್ ಮತ್ತು ಮುಂಬೈ ಇಂಡಿಯನ್ಸ್ ಎದುರು 10 ರನ್ ಡಿಫೆಂಡ್ ಮಾಡುವಾಗ ನೀವೆಲ್ಲಾ ಎಲ್ಲಿದ್ದಿರಿ? ಕೆಲವೊಮ್ಮೆ ಲೆಕ್ಕಾಚಾರ ತಪ್ಪಾಗುತ್ತದೆ’ ಎಂದು ವಿನಯ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.