Publish Date: Fri, 13 Mar 2026 (09:26 IST)
Updated Date: Fri, 13 Mar 2026 (09:32 IST)
Photo Credit: X
ತಿರುವನಂತಪುರಂ: ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ 2026 ರಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಹೀರೋ ಸಂಜು ಸ್ಯಾಮ್ಸನ್. ಇದೀಗ ಅವರು ಲೋಕಲ್ ಟೀ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವಕಪ್ ಗೆದ್ದ ಬಳಿಕ ಎಲ್ಲಾ ಆಟಗಾರರೂ ತಮ್ಮ ತವರಿಗೆ ಹೋಗಿದ್ದು ಅದ್ಧೂರಿ ಸ್ವಾಗತ ಸಿಕ್ಕಿದೆ. ಸಂಜು ಸ್ಯಾಮ್ಸನ್ ಕೂಡಾ ಇದಕ್ಕೆ ಹೊರತಲ್ಲ. ಬಹುತೇಕ ಕ್ರಿಕೆಟಿಗರು ವಿಶ್ವಕಪ್ ಮುಗಿದ ಬೆನ್ನಲ್ಲೇ ವಿದೇಶ ಪ್ರವಾಸ ಹೋಗಿದ್ದಾರೆ.
ಆದರೆ ಸಂಜು ಸ್ಯಾಮ್ಸನ್ ತಮ್ಮ ಕುಟುಂಬದವರ ಜೊತೆ ಕೇರಳದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಸಂಜು ಸ್ಯಾಮ್ಸನ್ ಇದೀಗ ಲೋಕಲ್ ಚಹಾ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯರಂತೆ ಚಹಾ ಸೇವಿಸಲು ಬಂದ ಸಂಜು ನೋಡಿ ಸ್ಥಳೀಯರಿಗೆ ಶಾಕ್ ಜೊತೆಗೆ ಖುಷಿಯೂ ಆಗಿದೆ.
ಸಂಜು ಸ್ಯಾಮ್ಸನ್ ನೋಡುತ್ತಿದ್ದಂತೇ ಅಂಗಡಿ ಸಿಬ್ಬಂದಿ ಜೊತೆಗೆ ಸ್ಥಳೀಯರೂ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಬಾಡಿಗಾರ್ಡ್ ಇಲ್ಲದೇ ಏಕಾಂಗಿಯಾಗಿ ಕೂತು ಸಿಂಪಲ್ ಆಗಿ ಬಂದು ತಮ್ಮ ಪಾಡಿಗೆ ತಾವು ಚಹಾ ಸೇವಿಸಿ ತೆರಳಿದ್ದಾರೆ.