Daily Horoscope

Select Your Language

Notifications

webdunia
webdunia
webdunia
webdunia

ಚೋಟು ವಿಶ್ವಕಪ್ ಗೆದ್ದುಕೊಡ್ತೀಯಾ ಎಂದು ಇಶಾನ್ ಗೆ ಕೇಳಿದ್ದರಂತೆ ಸೂರ್ಯಕುಮಾರ್

Ishan Kishan
Photo Credit: X
ಅಹ್ಮದಾಬಾದ್: ಓಯ್ ಚೋಟು ವಿಶ್ವಕಪ್ ಗೆದ್ದು ಕೊಡ್ತೀಯಾ ನಮಗೆ ಎಂದು ಇಶಾನ್ ಕಿಶನ್ ಗೆ ಕೇಳಿದ್ದರಂತೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್. ಅದಕ್ಕೆ ಅವರು ಏನು ಹೇಳಿದ್ದರು ಗೊತ್ತಾ?

ಟಿ20 ವಿಶ್ವಕಪ್ 2026 ಫೈನಲ್ ಗೆದ್ದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಕಪ್ ಗೆದ್ದು ಸಾಧನೆ ಮಾಡಿದೆ. ಕಳೆದ ಬಾರಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಯಂತಹ ದಿಗ್ಗಜರು ತಂಡದಲ್ಲಿದ್ದರು. ಆದರೆ ಈ ಬಾರಿ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಯುವ ಭಾರತ ತಂಡ ಕಪ್ ಗೆದ್ದಿದೆ.

ಕಪ್ ಜೊತೆಗೆ ಫೋಟೋ ಶೂಟ್ ಗೆ ಅಣಿಯಾಗುತ್ತಿದ್ದ ಸೂರ್ಯಕುಮಾರ್ ಯಾದವ್ ಸ್ಟಾರ್ ಸ್ಪೋರ್ಟ್ಸ್ ಗೆ ಸಂದರ್ಶನದಲ್ಲಿ ಇಶಾನ್ ಕಿಶನ್ ಮತ್ತು ಮೊಹಮ್ಮದ್ ಸಿರಾಜ್ ರನ್ನು ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ.

ನಮ್ಮ ಆಯ್ಕೆ ಸಮಿತಿ ಸಭೆಗೆ ಕೆಲವೇ ಕ್ಷಣಗಳ ಮೊದಲು ನಾನು ಇಶಾನ್ ಕಿಶನ್ ಗೆ ಕರೆ ಮಾಡಿದ್ದೆ. ‘ಓಯ್ ಚೋಟು ನಮಗೆ ವಿಶ್ವಕಪ್ ಗೆದ್ದುಕೊಡ್ತೀಯಾ’ ಎಂದು ಕೇಳಿದೆ. ಅದಕ್ಕೆ ಅವರು ‘ಭಯ್ಯಾ ಭರವಸೆ ಇಡಿ. ಖಂಡಿತಾ ಗೆದ್ದುಕೊಡುತ್ತೇನೆ’ ಎಂದಿದ್ದರು. ಅದಕ್ಕೆ ತಕ್ಕಂತೆ ಅವರು ಇಡೀ ಟೂರ್ನಮೆಂಟ್ ನಲ್ಲಿ ಆಡಿದ್ದು ಅದ್ಭುತವಾಗಿತ್ತು ಎಂದಿದ್ದಾರೆ.

ಇನ್ನು ಮೊಹಮ್ಮದ್ ಸಿರಾಜ್ ಕೂಡಾ ಹರ್ಷಿತ್ ರಾಣಾ ಗಾಯಗೊಂಡಿದ್ದರಿಂದ ಅನಿರೀಕ್ಷತವಾಗಿ ತಂಡಕ್ಕೆ ಬಂದವರು. ‘ಸಿರಾಜ್ ಗೆ ನಾನು ಕರೆ ಮಾಡುವಾಗ ಎಲ್ಲೋ ಗೆಳೆಯರ ಜೊತೆ ಕೂತು ತಿಂಡಿ ತಿನ್ನುತ್ತಿದ್ದರು. ತಂಡಕ್ಕೆ ಸೇರಬೇಕಾಗುತ್ತದೆ ಎಂದಾಗ ಏನು ತಮಾಷೆ ಮಾಡುತ್ತಿದ್ದೀರಾ ಎಂದರು. ಕೊನೆ ಕ್ಷಣದಲ್ಲಿ ಅವರು ತಂಡಕ್ಕೆ ಬಂದು ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದರು’ ಎಂದು ಸೂರ್ಯ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಮುಂದಿನ ಟಾರ್ಗೆಟ್ ಫಿಕ್ಸ್ ಮಾಡಿದ ಗೌತಮ್ ಗಂಭೀರ್