Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿರುವಾಗಲೇ ಅರ್ಷ್ ದೀಪ್ ಸಿಂಗ್ ಗೆ ಶಾಕ್ ಕೊಟ್ಟ ಐಸಿಸಿ

Arshdeep Singh
ಅಹ್ಮದಾಬಾದ್: ಟಿ20 ವಿಶ್ವಕಪ್ 2026 ಗೆಲುವಿನ ಸಂಭ್ರಮದಲ್ಲಿರುವಾಗಲೇ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಗೆ ಐಸಿಸಿ ಶಾಕ್ ಕೊಟ್ಟಿದೆ.

ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 96 ರನ್ ಗಳಿಂದ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಕಪ್ ಗೆದ್ದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ ವರ್ತನೆ ಹಲವರ ಟೀಕೆಗೆ ಗುರಿಯಾಗಿತ್ತು.

ನ್ಯೂಜಿಲೆಂಡ್ ಬ್ಯಾಟಿಗ ಡೆರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅರ್ಷ್ ದೀಪ್ ಬೇಕೆಂದೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿದ್ದರು. ಮಿಚೆಲ್ ಹೊಡೆದ ಬಾಲ್ ನ್ನು ಫಾಲೋ ಥ್ರೋನಲ್ಲಿ ಹಿಡಿದು ವಿಕೆಟ್ ಬದಲು ನೇರವಾಗಿ ಅವರ ಮೈಗೇ ಅರ್ಷ್ ದೀಪ್ ಎಸೆದಿದ್ದರು.

ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಐಸಿಸಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅರ್ಷ್ ದೀಪ್ ಸಿಂಗ್ ಗೆ ಒಂದು ಡಿಮೆರಿಟ್ ಪಾಯಿಂಟ್ ಮತ್ತು ಪಂದ್ಯದ ಶುಲ್ಕದಲ್ಲಿ ಶೇ.15 ರಷ್ಟು ದಂಡ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್‌ ವೇದಿಕೆಯಲ್ಲಿ ಇತಿಹಾಸ ಬರೆದ ವಿಶ್ವಕಪ್‌ ಫೈನಲ್‌ ಪಂದ್ಯ: ಎಷ್ಟು ಮಂದಿ ವೀಕ್ಷಣೆ ಪಡೆದಿದೆ ಗೊತ್ತಾ