ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

Krishnaveni K
ಶನಿವಾರ, 15 ನವೆಂಬರ್ 2025 (09:44 IST)
Photo Credit: X
ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಅವಮಾನಕರ ಪದ ಬಳಸಿದ್ದಾರೆ ಎನ್ನಲಾದ  ವಿಡಿಯೋ ಒಂದು ಈಗ ವೈರಲ್ ಆಗಿದೆ.

ಮೊದಲ ಇನಿಂಗ್ಸ್ ನಲ್ಲಿ ಟೆಂಬಾ ಬವುಮಾ ಬ್ಯಾಟಿಂಗ್ ಮಾಡುತ್ತಿದ್ದರು. ಬುಮ್ರಾ ಬೌಲಿಂಗ್ ನಲ್ಲಿ ಚೆಂಡು ಅವರ ಪ್ಯಾಡ್ ಗೆ ತಗುಲಿತು. ಬುಮ್ರಾ, ರಿಷಭ್ ಪಂತ್ ಎಲ್ ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಅಂಪಾಯರ್ ಇದನ್ನು ಪುರಸ್ಕರಿಸಲಿಲ್ಲ.

ಈ ವೇಳೆ ಬುಮ್ರಾ, ರಿಷಭ್ ಪಂತ್ ಹಾಗೂ ತಂಡದ ಇತರೆ ಆಟಗಾರರ ನಡುವೆ ಡಿಆರ್ ಎಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿತ್ತು. ಆಗ ಮೈದಾನದಲ್ಲಿ ಗಿಲ್ ಇರಲಿಲ್ಲ. ಪಂತ್ ನಾಯಕನ ಜವಾಬ್ಧಾರಿ ಹೊತ್ತಿದ್ದರು. ಹೀಗಾಗಿ ಬುಮ್ರಾ-ಪಂತ್ ನಡುವೆ ಚರ್ಚೆ ನಡೆಯಿತು.

ಪಂತ್ ರಿವ್ಯೂ ಬೇಡ ಎಂದರೆ ಬುಮ್ರಾ ‘ಅವರು ಡ್ವಾರ್ಫ್’ ಎಂದು ಬವುಮಾಗೆ ಹೇಳಿದರು. ಡ್ವಾರ್ಫ್ ಎಂದರೆ ಕುಬ್ಜ ಎಂದರ್ಥ. ನೇರವಾಗಿ ಈ ಮಾತನ್ನು ಬವುಮಾಗೆ ಬುಮ್ರಾ ಬಳಸಲಿಲ್ಲ. ಆದರೆ ಅವರನ್ನು ಉದ್ದೇಶಿಸಿ ಪಂತ್ ಬಳಿ ಈ ಅವಮಾನಕರ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

IND vs SA Test: ಟೀಂ ಇಂಡಿಯಾ ನಾಳೆಯೇ ಟೆಸ್ಟ್ ಮ್ಯಾಚ್ ಮುಗಿಸೋದು ಪಕ್ಕಾ

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ಮುಂದಿನ ಸುದ್ದಿ
Show comments