Webdunia - Bharat's app for daily news and videos

Install App

Vaibhav Suryavamshi: ಐಪಿಎಲ್‌ ಚೊಚ್ಚಲ ಪಂದ್ಯಾಟಕಕ್ಕಾಗಿ ಪಿಜ್ಜಾ, ಮಟನ್‌ಗೆ ಗುಡ್‌ಬೈ ಹೇಳಿದ ವೈಭವ್ ಸೂರ್ಯವಂಶಿ

Sampriya
ಭಾನುವಾರ, 20 ಏಪ್ರಿಲ್ 2025 (17:18 IST)
Photo Credit X
ನವದೆಹಲಿ: ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್‌ ಸೋಲು ಅನುಭವಿಸಿದರು, ಯುವ ಆಟಗಾರ ವೈಭವ್ ಸೂರ್ಯವಂಶಿ ವಿಶೇಷವಾಗಿ ಗಮನ ಸೆಳೆದರು.

ಕೇವಲ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಚೊಚ್ಚಲ ಐಪಿಎಲ್ ಪಂದ್ಯಾಟದಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದರು. 20 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಅನೇಕರ ಗಮನವನ್ನು ಸೆಳೆದರು. ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ಗೆ ಸಿಕ್ಸರ್‌ನೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಕಳೆದ ವರ್ಷ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ INR 1.1 ಕೋಟಿಗೆ ಖರೀದಿಸಲ್ಪಟ್ಟ ಸೂರ್ಯವಂಶಿ ಐಪಿಎಲ್‌ ಚೊಚ್ಚಲ ಪಂದ್ಯಾಟಕ್ಕಾಗಿ  ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಮಾಹಿತಿ ಪ್ರಕಾರ ಸೂರ್ಯವಂಶಿ ಮಟನ್ ಮತ್ತು ಪಿಜ್ಜಾ ಸೇವಿಸುವುದನ್ನೇ ನಿಲ್ಲಿದ್ದಾರೆ. ಸಣ್ಣ ವಯಸ್ಸಿನವನಾಗಿರು ವೈಭವ್ ಪಿಜ್ಜಾವನ್ನು ಇಷ್ಟಪಡುತ್ತಾನೆ. ಆದರೆ ಅವನ ಕ್ರಿಕೆಟ್‌ ಪ್ರೀತಿಗಾಗಿ ಅವೆಲ್ಲವನ್ನೂ ತಿನ್ನುವುದನ್ನು ನಿಲ್ಲಿಸಿದ್ದಾನೆ.  

ತರಬೇತುದಾರ ಓಜಾ ಅವರ ಈ ಬಗ್ಗೆ ಪ್ರತಿಕ್ರಿಯಿಸಿ, ಎಡಗೈ ಆಟಗಾರ ವೈಭವ್ ಅವರನ್ನು ಯುವರಾಜ್ ಸಿಂಗ್ ಮತ್ತು ಬ್ರಿಯಾನ್ ಲಾರಾ ಅವರ ಆಟದ ಶೈಲಿಯ ಹೋಲಿಕೆಯನ್ನು ಅವರಲ್ಲಿ ಕಾಣಬಹುದು.

ಅವನು ಬಹಳ ದೂರ ಹೋಗುತ್ತಾನೆ. ಐಪಿಎಲ್ ಚೊಚ್ಚಲ ಆರಂಭದಲ್ಲೇ  ಇನ್ನಿಂಗ್ಸ್ ಪ್ರಾರಂಭಿಸಿದ ರೀತಿಯನ್ನು ನಾವು ನೋಡಿದ್ದೇವೆ ಮತ್ತು ನಾನು ನಿಮಗೆ ಭರವಸೆ ನೀಡಬಲ್ಲೆ - ಮುಂಬರುವ ಪಂದ್ಯಗಳಲ್ಲಿ ಅವರು ದೊಡ್ಡ ಸ್ಕೋರ್ ಮಾಡುತ್ತಾರೆ ಎಂದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments