ನವದೆಹಲಿ: ಐಪಿಎಲ್ 2025 ರಲ್ಲಿ ನಿನ್ನೆ ಸಿಎಸ್ ಕೆ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಬಳಿಕ ಯುವ ಬ್ಯಾಟಿಗ ವೈಭವ್ ಸೂರ್ಯವಂಶಿ ತಮ್ಮ ಜೊತೆ ನಡೆದುಕೊಂಡ ರೀತಿಗೆ ಧೋನಿ ಅರೆಕ್ಷಣ ಶಾಕ್ ಆದರು. ಅವರ ವಿಡಿಯೋ ಈಗ ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಗಳಿಂದ ಗೆದ್ದು ಕೂಟ ಮುಗಿಸಿತು. ಅತ್ತ ಚೆನ್ನೈ ಕೊನೆಯ ಪಂದ್ಯವನ್ನೂ ಸೋತು ಅಂಕಪಟ್ಟಿಯಲ್ಲಿ ಕೊನೆಯದಾಗಿ ಈ ಕೂಟಕ್ಕೆ ವಿದಾಯ ಹೇಳಿತು.
ರಾಜಸ್ಥಾನ್ ರಾಯಲ್ಸ್ ಈ ಐಪಿಎಲ್ ನಲ್ಲಿ ಸತತ ಸೋಲು ಕಂಡರೂ 14 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಬೀಡುಬೀಸಾದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ನಿನ್ನೆಯ ಪಂದ್ಯದ ಬಳಿಕ ಸಿಎಸ್ ಕೆ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡುವಾಗ ಸೂರ್ಯವಂಶಿ ಧೋನಿ ಕಾಲಿಗೆ ಬಿದ್ದಿದ್ದಾರೆ.
ಮೊದಲು ಧೋನಿ ಕೈಕುಲುಕಿದ ವೈಭವ್ ನೇರವಾಗಿ ಕಾಲಿಗೆ ನಮಸ್ಕರಿಸಿದ್ದಾರೆ. ವೈಭವ್ ವರ್ತನೆಗೆ ಅರೆಕ್ಷಣ ಗಲಿಬಿಲಿಯಾದರೂ ಧೋನಿ ಸಾವರಿಸಿಕೊಂಡು ನಗು ನಗುತ್ತಲೇ ಹಾರೈಸಿದ್ದಾರೆ. ವೈಭವ್ ವರ್ತನೆಯನ್ನು ನೆಟ್ಟಿಗರೂ ಕೊಂಡಾಡಿದ್ದಾರೆ. ಇದು ಭಾರತದ ಸಂಸ್ಕೃತಿ. ಹಿರಿಯರಿಗೆ ನಮಸ್ಕರಿಸುವುದು ನಮ್ಮ ಪದ್ಧತಿ ಎಂದಿದ್ದಾರೆ.