ಚೆನ್ನೈ: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್ ಕೆ ಕ್ಯಾಪ್ಟನ್ ಧೋನಿ ಹೊಡೆದ ಸಿಕ್ಸರ್ ನ್ನು ಸಿಎಸ್ ಕೆ ಬೌಲರ್ ರವೀಂದ್ರ ಜಡೇಜಾ ಹಿಡಿದಿ ವಿಡಿಯೋ ಇಲ್ಲಿದೆ ನೋಡಿ.
ನಿನ್ನೆಯ ಪಂದ್ಯವನ್ನು ಪಂಜಾಬ್ 4 ವಿಕೆಟ್ ಗಳಿಂದ ಗದ್ದು ಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 190 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ 6 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು.
ಈ ಪಂದ್ಯದಲ್ಲಿ ಧೋನಿ 4 ಎಸೆತಗಳಿಂದ 1 ಸಿಕ್ಸರ್ ಸಹಿತ 11 ರನ್ ಗಳಿಸಿದರು. ಒಂದೇ ಕೈಯಿಂದ ಧೋನಿ ಭರ್ಜರಿ ಸಿಕ್ಸರ್ ಒಂದನ್ನು ಸಿಡಿಸಿದರು. ಈ ಬಾಲ್ ನೇರವಾಗಿ ಸಿಎಸ್ ಕೆ ಡಗ್ ಔಟ್ ಬಳಿ ಬಂದಿದೆ.
ಅಲ್ಲಿಯೇ ಇದ್ದ ರವೀಂದ್ರ ಜಡೇಜಾ ಕ್ಯಾಚ್ ಪಡೆದು ವಿಕೆಟ್ ಪಡೆದವರಂತೆ ಸಂಭ್ರಮಿಸಿದ ವಿಡಿಯೋ ಫನ್ನಿಯಾಗಿತ್ತು. ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ ಕೆ ಹೆಚ್ಚು ಕಡಿಮೆ ಟೂರ್ನಿಯಿಂದಲೇ ಔಟ್ ಆಗಿದೆ.