Publish Date: Mon, 04 Sep 2023 (08:30 IST)
Updated Date: Mon, 04 Sep 2023 (08:42 IST)
ಮುಂಬೈ: ಏಷ್ಯಾ ಕಪ್ ಆಡುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವಕಪ್ ತಂಡವನ್ನೂ ಆಯ್ಕೆಗಾರರು ಅಂತಿಮಗೊಳಿಸಿದ್ದಾರೆ. ಆ ಪ್ರಕಾರ ಮೂವರು ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಏಷ್ಯಾ ಕಪ್ ನಡೆಯುತ್ತಿರುವ ಶ್ರೀಲಂಕಾಗೆ ಭೇಟಿ ನೀಡಿ ನಾಯಕ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಜೊತೆಗೆ ಚರ್ಚೆ ನಡೆಸಿದ್ದು, ಈಗಾಗಲೇ ತಂಡದ ಅಂತಿಮ ಪಟ್ಟಿ ತಯಾರು ಮಾಡಿದ್ದಾರೆ ಎನ್ನಲಾಗಿದೆ.
ಆ ಪ್ರಕಾರ ಏಷ್ಯಾ ಕಪ್ ನಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದ ಸಂಜು ಸ್ಯಾಮ್ಸನ್, ವೇಗಿ ಪ್ರಸಿದ್ಧ ಕೃಷ್ಣ, ಯುವ ಬ್ಯಾಟಿಗ ತಿಲಕ್ ವರ್ಮರನ್ನು ತಂಡದಿಂದ ಕೈಬಿಡಲಾಗಿದೆಯಂತೆ. ಇದೇ ವಾರ ತಂಡ ಅಧಿಕೃತವಾಗಿ ಘೋಷಣೆಯಾಗುವ ಸಾಧ‍್ಯತೆಯಿದೆ.