Publish Date: Mon, 04 Sep 2023 (08:20 IST)
Updated Date: Mon, 04 Sep 2023 (08:39 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಏಷ್ಯಾ ಕಪ್ ನ ಇಂದಿನ ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಕೌಟುಂಬಿಕ ಕಾರಣಗಳಿಗಾಗಿ ಅವರು ತವರಿಗೆ ವಾಪಸ್ ಆಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಆದರೆ ಇದೀಗ ಪತ್ನಿ ಸಂಜನಾ ಗಣೇಶನ್ ಹೆರಿಗೆ ದಿನಾಂಕವಾಗಿದ್ದರಿಂದ ಕುಟುಂಬದ ಜೊತೆಗಿರಲು ಮುಂಬೈಗೆ ಮರಳಿದ್ದಾರೆ.
ಮುಂದಿನ ಪಂದ್ಯದ ವೇಳೆಗೆ ಅವರು ಮತ್ತೆ ತಂಡಕ್ಕೆ ವಾಪಸ್ ಆಗಲಿದ್ದಾರೆ. 2021 ರಲ್ಲಿ ಬುಮ್ರಾ ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.