Publish Date: Sun, 03 Sep 2023 (09:20 IST)
Updated Date: Sun, 03 Sep 2023 (09:27 IST)
ಮುಂಬೈ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳಲ್ಲಿ ತಂಡದ ಭಾಗವಾಗಿರುವ ಕೆಎಲ್ ರಾಹುಲ್ ಫಿಟ್ನೆಸ್ ಪರೀಕ್ಷೆ ಪಾಸು ಮಾಡಿಕೊಂಡಿದ್ದಾರೆ.
ಫಿಟ್ನೆಸ್ ಕೊರತೆಯಿಂದಾಗಿ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಪ್ರಕಟಿಸಿತ್ತು. ಇದೀಗ ಫಿಟ್ನೆಸ್ ಪರೀಕ್ಷೆಗೊಳಪಟ್ಟಿರುವ ರಾಹುಲ್ ಆಡಲು ಅರ್ಹ ಎಂದು ವೈದ್ಯಕೀಯ ತಂಡ ಖಚಿತಪಡಿಸಿದೆ.
ಈ ಹಿನ್ನಲೆಯಲ್ಲಿ ಅವರು ಲಂಕಾಗೆ ಪ್ರಯಾಣಿಸಲಿದ್ದಾರೆ. ಮೂರನೇ ಪಂದ್ಯದಿಂದ ಅವರು ತಂಡದ ಆಯ್ಕೆಗೆ ಲಭ‍್ಯರಿರಲಿದ್ದಾರೆ. ನಾಳೆಯ ಪಂದ್ಯದಲ್ಲಿ ಅವರು ಆಡುವುದಿಲ್ಲ.