Publish Date: Sat, 02 Sep 2023 (08:30 IST)
Updated Date: Sat, 02 Sep 2023 (08:33 IST)
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2 ರಂದು ಪರಸ್ಪರ ಮುಖಾಮುಖಿಯಾಗುತ್ತಿವೆ. ಇದಕ್ಕೆ ಮೊದಲು ಏಕದಿನ ಮತ್ತು ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಎರಡೂ ತಂಡಗಳ ನಡುವೆ ಎಷ್ಟು ಪಂದ್ಯ ನಡೆದಿದೆ, ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ ಎಂಬ ಅಂಕಿ ಅಂಶ ಗಮನಿಸೋಣ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು 132 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 55 ಪಂದ್ಯ ಗೆದ್ದರೆ, ಪಾಕಿಸ್ತಾನ 73 ಪಂದ್ಯಗಳನ್ನು ಗೆದ್ದುಕೊಂಡಿತ್ತು. ನಾಲ್ಕು ಪಂದ್ಯ ಫಲಿತಾಂಶವಿಲ್ಲದೇ ಮುಕ್ತಾಯವಾಗಿದೆ.
ಏಕದಿನ ಮಾದರಿಯ ಏಷ್ಯಾ ಕಪ್ ನಲ್ಲಿ 13 ಬಾರಿ ಸಾಂಪ್ರದಾಯಿಕ ಎದುರಾಳಿಗಳು ಸೆಣಸಾಡಿವೆ. ಈ ಪೈಕಿ ಭಾರತ 7 ಪಂದ್ಯಗಳನ್ನು ಗೆದ್ದರೆ ಪಾಕ್ ಐದು ಬಾರಿ ಗೆಲುವು ಕಂಡಿದೆ. ಇದು 14 ನೇ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡ ಏಷ್ಯಾ ಕಪ್ ನಲ್ಲಿ ಮುಖಾಮುಖಿಯಾಗುತ್ತಿವೆ.
Krishnaveni K
Publish Date: Sat, 02 Sep 2023 (08:30 IST)
Updated Date: Sat, 02 Sep 2023 (08:33 IST)