Publish Date: Mon, 04 Sep 2023 (08:10 IST)
Updated Date: Mon, 04 Sep 2023 (08:32 IST)
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಇಂದು ನೇಪಾಳವನ್ನು ಎದುರಿಸಲಿದೆ. ಆದರೆ ಇಂದಿನ ಪಂದ್ಯಕ್ಕೂ ಮಳೆ ಭೀತಿ ಆತಂಕ ತಂದಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 266 ರನ್ ಗಳಿಗೆ ಆಲೌಟ್ ಆಗಿತ್ತು ಎರಡನೇ ಸರದಿಯ ಪಂದ್ಯ ನಡೆಯಲಿಲ್ಲ. ಇದರಿಂದಾಗಿ ಅಂಕ ಹಂಚಿಕೊಳ್ಳಬೇಕಾಯಿತು. ಹೀಗಾಗಿ ಟೀಂ ಇಂಡಿಯಾ ಗೆಲುವಿನ ಅನಿವಾರ್ಯತೆಯಲ್ಲಿದೆ.
ಇಂದೂ ಕೂಡಾ ಟೀಂ ಇಂಡಿಯಾ ಅದೇ ತಂಡದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಗರು ವೈಫಲ್ಯ ಅನುಭವಿಸಿದ್ದರು. ಇಂದು ಆ ಕೊರತೆ ನೀಗಿಸುವ ವಿಶ್ವಾಸದಲ್ಲಿದ್ದಾರೆ. ಈ ಪಂದ್ಯ ಅಪರಾಹ್ನ 3. ಗಂಟೆಗೆ ನಡೆಯುವುದು.