ಪಲ್ಲಿಕೆಲೆ: ಏಷ್ಯಾಕಪ್ ಕ್ರಿಕೆಟ್ ನಲ್ಲಿ ಇನ್ನೂ ಗೆಲುವಿನ ಖಾತೆ ತೆರೆಯದ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಕಾದಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿದ 266 ರನ್ ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದ ಎರಡನೇ ಸರದಿ ವೇಳೆ ಮಳೆ ಸುರಿದಿದ್ದರಿಂದ ಪಂದ್ಯ ರದ್ದಾಗಿತ್ತು. ಇದರಿಂದ ಪಾಕಿಸ್ತಾನದೊಂದಿಗೆ ಭಾರತ 1 ಅಂಕ ಹಂಚಿಕೊಳ್ಳಬೇಕಾಯಿತು.
ಇದೀಗ ನಾಳೆ ನೇಪಾಳ ವಿರುದ್ಧ ಭಾರತ ಎರಡನೇ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಲಿದೆ. ಆದರೆ ಈ ಪಂದ್ಯಕ್ಕೂ ಮಳೆ ಭೀತಿಯಿದೆ. ಹೀಗಾಗಿ ನಾಳೆಯ ಪಂದ್ಯವೂ ನಡೆಯುವುದು ಅನುಮಾನವಾಗಿದೆ. ಹವಾಮಾನ ವರದಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ತಂದಿದೆ.