Webdunia - Bharat's app for daily news and videos

Install App

ಸಿಕ್ಸರ್‌ ಸಿಡಿಸಿ ಉಡೀಸ್ ಮಾಡಿದ ಕಾರಿನ ಗಾಜನ್ನು ಗಿಫ್ಟ್‌ ಪಡೆದ ಆರ್‌ಸಿಬಿ ಆಟಗಾರ್ತಿ

Sampriya
ಶನಿವಾರ, 16 ಮಾರ್ಚ್ 2024 (17:06 IST)
Photo Courtesy Instagram
ನವದೆಹಲಿ: ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಂಕಷ್ಟದ ಸಮಯದಲ್ಲಿ ತಮ್ಮ ತಂಡವನ್ನು ಮೇಲಕ್ಕೆತ್ತಿ ಫೀಮೇಲ್ ಎಬಿಡಿ ಎಂದೇ ಖ್ಯಾತರಾಗಿದ್ದಾರೆ. ಇನ್ನೂ ಫೈನಲ್‌ಗೆ ತಲುಪಿದ ಆರ್‌ಸಿಬಿಯ ಆಲ್‌ ರೌಂಡರ್ ಎಲ್ಲಿಸ್‌ಗೆ ಟಾಟಾ ಗ್ರೂಫ್ ನೀಡಿದ ವಿಶೇಷ ಉಡುಗೊರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 
 
ಮಾರ್ಚ್ 4 ರಂದು ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ತಂಡದ ಮಧ್ಯೆ ಪಂದ್ಯಾಟ ನಡೆದಿತ್ತು. ಈ ವೇಳೆ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸ್​ ಸಿಡಿಸಿದ್ದರು. ಚೆಂಡು ನೇರವಾಗಿ ಬೌಂಡರಿ ಲೈನ್​ ಹತ್ತಿರ ನಿಲ್ಲಿಸಿದ್ದ ಟಾಟಾ ಪಂಚ್ ಇವಿ ಕಾರಿನ ಗಾಜಿಗೆ ಹೊಡೆದಿದೆ. ಹೊಡೆದ ಬಿರುಸಿಗೆ ಕಾರಿನ ಗಾಜು ಪುಡಿ ಪುಡಿಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆ ಹೊಡೆದು ಹೋಗಿರುವ ಗಾಜಿನ ಪುಡಿಯನ್ನು ಸಂಗ್ರಹಿಸಿ ಅದಕ್ಕೆ ಫ್ರೇಮ್​ ಹಾಕಿಸಿ ಎಲ್ಲಿಸ್​ ಪೆರ್ರಿಗೆ ಟಾಟಾ ಗ್ರೂಪ್ಸ್​ ಉಡುಗೊರೆಯಾಗಿ ನೀಡಿದೆ.
 
ಈ ಮೂಲಕ ಪೆರ್ರಿಯ ಸ್ಮರಣೀಯ ಇನಿಂಗ್ಸ್ ಅನ್ನು ಹೊಡೆದ ಗಾಜಿನೊಂದಿಗೆ ಟಾಟಾ ಗ್ರೂಪ್ಸ್ ಮತ್ತಷ್ಟು ಸ್ಮರಣೀಯವಾಗಿಸಿದೆ. ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಎಲ್ಲಿಸ್ ಪೆರ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
 
ನಿನ್ನೆ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ ಅನ್ನು ಮಣಿಸಿ ಪೈನಲ್ ಪ್ರವೇಶಿಸಿದೆ.  ಇನ್ನೂ ನಾಳೆ ನಡೆಯಲಿರುವ ಫೈನಲ್ ಪಂದ್ಯಾಟದಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. 
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಟೆಸ್ಟ್ ಪರೀಕ್ಷೆ

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ: ದಿಡೀರ್ ನಿರ್ಧಾರದ ಹಿಂದಿದೆ ಕಾರಣ

ಮುಂದಿನ ಸುದ್ದಿ
Show comments