ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟಿ20 ಪಂದ್ಯದಲ್ಲಿ ಭಾರತ ಭರ್ಜರಿಯಾಗಿ 6 ವಿಕೆಟ್ ಗಳಿಂದ ಗೆಲುವು ಕಂಡಿದೆ. ಈ ಮೂಲಕ ಕಂಗಾರೂಗಳ ನಾಡಿನಲ್ಲಿ ಈ ಪ್ರವಾಸದಲ್ಲಿ ಮೊದಲ ಜಯದ ಜತೆಗೆ ಟಿ20 ಸರಣಿ ಸಮಬಲಗೊಳಿಸಿದೆ.
									
										
								
																	
 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಭಾರತದ ಪರ ಕೃನಾಲ್ ಪಾಂಡ್ಯ 4 ವಿಕೆಟ್ ಕಿತ್ತು ಗಮನ ಸೆಳೆದರು.
									
			
			 
 			
 
 			
			                     
							
							
			        							
								
																	ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಕಂಡಿತು. ರೋಹಿತ್ ಶರ್ಮಾ (16 ಎಸೆತಗಳಲ್ಲಿ 23 ರನ್) ಮತ್ತು ಶಿಖರ್ ಧವನ್ (22 ಎಸೆತಗಳಲ್ಲಿ 41 ರನ್) ಸ್ಪೋಟಕ ಆರಂಭ ನೀಡಿದರು. ಬಳಿಕ ವಿರಾಟ್ ಕೊಹ್ಲಿ ತಮ್ಮ ಎಂದಿನ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 41 ಎಸೆತಗಳಿಂದ 61 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಕೆಎಲ್ ರಾಹುಲ್ ಕೇವಲ 14 ರನ್ ಗಳಿಸಿದರೆ, ರಿಷಬ್ ಪಂತ್ ಶೂನ್ಯ ಸಂಪಾದಿಸಿದರು. ದಿನೇಶ್ ಕಾರ್ತಿಕ್ ಅಜೇಯರಾಗಿ 22 ರನ್ ಗಳಿಸಿದರು. ಭಾರತ 19.4 ಓವರ್ ಗಳಲ್ಲಿ 4  ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.