Publish Date: Sat, 26 Jan 2019 (14:40 IST)
Updated Date: Sat, 26 Jan 2019 (14:42 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 90 ರನ್ ಗಳಿಂದ ಗೆದ್ದುಕೊಂಡಿದೆ.
ಇದು ಭಾರತಕ್ಕೆ ನ್ಯೂಜಿಲೆಂಡ್ ನಲ್ಲಿ ಬೃಹತ್ ಅಂತರದ ಗೆಲುವಾಗಿದೆ. ಇದಕ್ಕೂ ಮೊದಲು ಹ್ಯಾಮಿಲ್ಟನ್ ನಲ್ಲಿ 84 ರನ್ ಗಳಿಂದ ಗೆದ್ದಿದ್ದೇ ಬೃಹತ್ ಅಂತರದ ಗೆಲುವಾಗಿತ್ತು.
ಭಾರತ ಗೆಲುವಿಗೆ ನೀಡಿದ್ದ 324 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅತಿಥೇಯ ತಂಡ 40.2 ಓವರ್ ಗಳಲ್ಲಿ 234 ರನ್ ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಡಗ್ ಬ್ರೇಸ್ ವೆಲ್ 57 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು. ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್ ತಲಾ 2 ಮತ್ತು ಮೊಹಮ್ಮದ್ ಶಮಿ ಒಂದು ವಿಕೆಟ್ ಕಿತ್ತರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ