Publish Date: Sat, 26 Jan 2019 (11:05 IST)
Updated Date: Sat, 26 Jan 2019 (11:06 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳ ಸಾಂಘಿಕ ಪ್ರದರ್ಶನದಿಂದ ಭಾರತ ಎದುರಾಳಿಗಳಿಗೆ ಗೆಲುವಿಗೆ 324 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾಕ್ಕೆ ಆರಂಭಿಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಧವನ್ 66 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ರೋಹಿತ್ 87 ರನ್ ಗಳಿಗೆ ಔಟಾದರು. ನಾಯಕ ಕೊಹ್ಲಿ 43 ಮತ್ತು ಅಂಬಟಿ ರಾಯುಡು 47 ರನ್ ಗಳಿಸಿದರು.
ಕೊನೆಯಲ್ಲಿ ಬಂದ ಧೋನಿ 33 ಬಾಲ್ ನಲ್ಲಿ ಭರ್ಜರಿ 48 ರನ್ ಸಿಡಿಸಿದರೆ ಕೇದಾರ್ ಜಾದವ್ ಕೇವಲ 10 ಎಸೆತಗಳಲ್ಲಿ 22 ರನ್ ಸಿಡಿಸಿ ಮೊತ್ತ 300 ರ ಗಡಿ ದಾಟಲು ಕಾರಣರಾದರು. ಇದರೊಂದಿಗೆ ಭಾರತ ಅಂತಿಮವಾಗಿ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ