Publish Date: Sat, 26 Jan 2019 (12:03 IST)
Updated Date: Sat, 26 Jan 2019 (12:04 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ನಲ್ಲಿ 39 ರನ್ ಗಳ ಅಲ್ಪ ಮುನ್ನಡೆ ದೊರೆತಿದೆ.
ಸೌರಾಷ್ಟ್ರ ಮೊದಲ ಇನಿಂಗ್ಸ್ ನಲ್ಲಿ 236 ಕ್ಕೆ ಆಲೌಟ್ ಆಯಿತು. ಕರ್ನಾಟಕ 275 ರನ್ ಗಳಿಸಿತ್ತು. ಇತ್ತೀಚೆಗಿನ ವರದಿ ಬಂದಾಗ ಭೋಜನ ವಿರಾಮದ ವೇಳೆಗೆ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತ್ತು. ಇದರೊಂದಿಗೆ ಒಟ್ಟಾರೆ 118 ರನ್ ಮುನ್ನಡೆ ಪಡೆದಿದೆ.
ಸದ್ಯಕ್ಕೆ ಕ್ರೀಸ್ ನಲ್ಲಿ 32 ರನ್ ಗಳಿಸಿರುವ ಮಯಾಂಕ್ ಅಗರ್ವಾಲ್ ಮತ್ತು 17 ರನ್ ಗಳಿಸಿರುವ ಮನೀಶ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ