ಏಷ್ಯಾ ಕಪ್: ಕಾಲ ಮಿಂಚಿ ಹೋದ ಮೇಲೆ ಫಾರ್ಮ್ ಗೆ ಬಂದ ಟೀಂ ಇಂಡಿಯಾ

Webdunia
ಶುಕ್ರವಾರ, 9 ಸೆಪ್ಟಂಬರ್ 2022 (08:00 IST)
ದುಬೈ: ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಔಪಚಾರಿಕ ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಟೀಂ ಇಂಡಿಯಾ ಈ ಟೂರ್ನಿಯುದ್ಧಕ್ಕೂ ಈ ರೀತಿ ಸರ್ವಾಂಗೀಣ ಪ್ರದರ್ಶನ ತೋರಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಸೂಕ್ತ ಕಾಲದಲ್ಲಿ ಸೂಕ್ತ ಆಟವಾಡದೇ ನಿನ್ನೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಔಪಚಾರಿಕ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಘರ್ಜಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಅಫ್ಘಾನ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಲಷ್ಟೇ ಶಕ್ತವಾಯಿತು.

ಭುವನೇಶ್ವರ್ ಕುಮಾರ್ ಆರಂಭದಲ್ಲೇ ಸತತ ನಾಲ್ಕು ವಿಕೆಟ್ ಕಿತ್ತು ಎದುರಾಳಿಗಳನ್ನು ಸೊಲ್ಲೆತ್ತದಂತೆ ಮಾಡಿದರು. ಬಳಿಕ ಅವರು ಮತ್ತೊಂದು ವಿಕೆಟ್ ಕಬಳಿಸಿ 4 ಓವರ್ ಗಳ ಕೋಟಾದಲ್ಲಿ 4 ರನ್ ನೀಡಿ 5 ವಿಕೆಟ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ವಿಶೇಷವಾಗಿ ನಿನ್ನೆ ಅವರ ಬೌಲಿಂಗ್ ನಲ್ಲಿ ಎಂದಿನ ಸ್ವಿಂಗ್, ಮೊನಚು ಕಾಣಬಹುದಿತ್ತು. ಉಳಿದಂತೆ ಅರ್ಷ್ ದೀಪ್ ಸಿಂಗ್, ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು.  ಅಫ್ಘಾನಿಸ್ತಾನ ಪರ ಮಿಂಚಿದ  ಇಬ್ರಾಹಿಂದ ಜಾರ್ಡನ್ 64 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಕೂಟದಿಂದ ಹೊರಬಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎದುರಾಳಿ ಆಟಗಾರನಾಗಿದ್ದರೂ ಕನ್ನಡಿಗ ಮನೀಶ್ ಪಾಂಡೆಗೆ ವಿರಾಟ್ ಕೊಹ್ಲಿ ಶಹಬ್ಬಾಷ್ Video

IPL 2026: ವಿರಾಟ್ ಕೊಹ್ಲಿ ಕಾಲಿಗೆ ಬೀಳಲು ಮೈದಾನಕ್ಕೇ ನುಗ್ಗಿದ ಅಭಿಮಾನಿ: ಕೊಹ್ಲಿ ಮಾಡಿದ್ದೇನು video

ಮೊದಲ ರನ್ ಗಳಿಸಿದ್ದಕ್ಕೆ ವಿರಾಟ್ ಕೊಹ್ಲಿ ಈ ಪರಿ ಸಂಭ್ರಮಿಸಿದ್ದೇಕೆ Video

IPL 2026: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ಕೆಕೆಆರ್‌: ಪ್ಲೇ ಆಫ್‌ನತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS KKR, ಇನ್ನೂ ಶುರುವಾಗದ ಪಂದ್ಯಾಟ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments