Select Your Language

Notifications

webdunia
webdunia
webdunia
webdunia

ಮಧ್ಯಮರ ಪರಾಕ್ರಮದಿಂದ ಗೆದ್ದ ಟೀಂ ಇಂಡಿಯಾ

ಮಧ್ಯಮರ ಪರಾಕ್ರಮದಿಂದ ಗೆದ್ದ ಟೀಂ ಇಂಡಿಯಾ
ಧರ್ಮಶಾಲಾ , ಭಾನುವಾರ, 27 ಫೆಬ್ರವರಿ 2022 (08:40 IST)
ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ದ್ವಿತೀಯ ಪಂದ್ಯವನ್ನು ಭರ್ಜರಿಯಾಗಿ 7 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಆದರೆ ಮಧ‍್ಯಮ ಕ್ರಮಾಂಕದ ಬ್ಯಾಟರ್ ಗಳಿಂದಾಗಿ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆರಂಭಿಕರಾದ ರೋಹಿತ್ ಶರ್ಮಾ (1), ಇಶಾನ್ ಕಿಶನ್ (16) ಬೇಗನೇ ಔಟಾದರು. ಆದರೆ ಈ ಸಂದರ್ಭದಲ್ಲಿ ಮಧ‍್ಯಮ ಕ್ರಮಾಂಕ ತಂಡದ ಕೈ ಹಿಡಿಯಿತು. ಸಂಜು ಸ್ಯಾಮ್ಸನ್ 39 ರನ್ ಗಳಿಸಿ ಔಟಾದರು. ಆದರೆ ನಂತರ ಶ್ರೇಯಸ್ ಅಯ್ಯರ್ ಮತ್ತೊಂದು ಜಬರ್ದಸ್ತ್ ಇನಿಂಗ್ಸ್ ಆಡಿದರು. ಕೇವಲ 44 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು.

ಇನ್ನೊಂದೆಡೆ ಅವರಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜಾ 18 ಎಸೆತಗಳಿಂದ 45 ರನ್ ಗಳಿಸಿ ಗೆಲುವಿನ ರನ್ ಬಾರಿಸಿದರು. ಇದರೊಂದಿಗೆ ರೋಹಿತ್ ಪಡೆ ಸತತ ಎರಡು ಟಿ20 ಸರಣಿಯನ್ನು ಗೆದ್ದುಕೊಂಡಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ 184 ರನ್ ಗಳ ಗುರಿ ನೀಡಿದ ಶ್ರೀಲಂಕಾ