Publish Date: Sat, 26 Feb 2022 (20:40 IST)
Updated Date: Sat, 26 Feb 2022 (20:41 IST)
ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ.
ಇದರೊಂದಿಗೆ ಟೀಂ ಇಂಡಿಯಾ ಗೆಲುವಿಗೆ 184 ರನ್ ಗಳ ಗುರಿ ನಿಗದಿಯಾಗಿದೆ. ಲಂಕಾ ಪರ ಅದ್ಭುತ ಆಟವಾಡಿದ ಆರಂಭಿಕ ಪತುಂ ನಿಸಂಕಾ 53 ಎಸೆತಗಳಿಂದ 75 ರನ್ ಸಿಡಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ದನುಷ ಗುಣತಿಲಕ 38 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ನಾಯಕ ದಸುನು ಶಣಕ ಅಜೇಯ 47 ರನ್ ಗಳಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.