ಚೆನ್ನೈ: ರಣಜಿ ಟ್ರೋಫಿ ಕ್ರಿಕೆಟ್ ನ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಕರ್ನಾಟಕ ಎದುರಾಳಿ ಜಮ್ಮು ಕಾಶ್ಮೀರ ವಿರುದ್ಧ ಗೆಲುವಿನ ಹೊಸ್ತಿಲಲ್ಲಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಜಮ್ಮು ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ. ಜಮ್ಮು ಗೆಲುವಿಗೆ ಇನ್ನೂ 359 ರನ್ ಗಳಿಸಬೇಕಿದೆ. ಆದರೆ ಕೈಯಲ್ಲಿ ಕೇವಲ 6 ವಿಕೆಟ್ ಬಾಕಿಯಿದೆ. ಹೀಗಾಗಿ ಕರ್ನಾಟಕಕ್ಕೆ ಗೆಲುವು ಸನಿಹದಲ್ಲೇ ಇದೆ.
ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ 302 ರನ್ ಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಜಮ್ಮು ಕಾಶ್ಮೀರ ಕೇವಲ 93 ರನ್ ಗಳಿಗೆ ಇನಿಂಗ್ಸ್ ಮುಗಿಸಿತ್ತು. ಎರಡನೇ ಇನಿಂಗ್ಸ್ ನಲ್ಲಿ ಕರ್ನಾಟಕ 3 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದಾಗಿ ಜಮ್ಮು ತಂಡಕ್ಕೆ ಗೆಲುವಿಗೆ 435 ರನ್ ಗಳ ಬೃಹತ್ ಮೊತ್ತ ಸಿಕ್ಕಿತ್ತು.