ಮುಂಬೈ: ಟೀಂ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಅಜಿತ್ ಅಗರ್ಕರ್ ಅವರನ್ನು ಕರೆತರಬೇಕು ಎಂದು ಹಿರಿಯ ಕ್ರಿಕೆಟಿಗರಿಂದಲೇ ಒತ್ತಾಯ ಕೇಳಿಬಂದಿದೆ ಎಂಬ ಸುದ್ದಿಯಿದೆ.
ಟೀಂ ಇಂಡಿಯಾದ ಹಿರಿಯ ಬೌಲರ್ ಒಬ್ಬರು ಸ್ವತಃ ಬಿಸಿಸಿಐಗೆ ಈ ಬಗ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗೆ ಜೊತೆಯಾಗಿ ಬೌಲಿಂಗ್ ಕೋಚ್ ಆಗಿ ಪರಸ್ ಮಾಂಬ್ರೆ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಈಗ 28 ಟೆಸ್ಟ್, 191 ಏಕದಿನ ಪಂದ್ಯವಾಡಿರುವ ಅನುಭವಿ ಅಜಿತ್ ಅಗರ್ಕರ್ ರನ್ನು ಬೌಲಿಂಗ್ ಕೋಚ್ ಆಗಿ ತಂಡಕ್ಕೆ ಕರೆತರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದಕ್ಕೆ ಬಿಸಿಸಿಐ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದುನೋಡಬೇಕಿದೆ.