Publish Date: Sun, 02 Jun 2019 (09:20 IST)
Updated Date: Sun, 02 Jun 2019 (09:21 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯಕ್ಕೆ ಇನ್ನೇನು ಕೆಲವೇ ದಿನವಿದೆ. ಈಗಾಗಲೇ ಕೂಟ ಆರಂಭವಾಗಿದೆ. ಹೀಗಿರುವಾಗ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮಾಡುವುದು ಬಿಟ್ಟು ಜಂಗಲ್ ಸಫಾರಿ ಮಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಟೀಂ ಇಂಡಿಯಾ ಕ್ರಿಕೆಟಿಗರು ಕಾಡು ಮೇಡು ಸುತ್ತಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಈಗಲೂ ಈ ಮೋಜು ಮಸ್ತಿ ಬೇಕಾ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ನಿಮ್ಮನ್ನು ಎಂಜಾಯ್ ಮಾಡಲು ಅಲ್ಲಿಗೆ ಕಳುಹಿಸಿಲ್ಲ. ಕ್ರಿಕೆಟ್ ಆಡಲು. ಮೊದಲು ಪ್ರಾಕ್ಟೀಸ್ ಮಾಡಿ. ಇದೇ ರೀತಿ ಮೋಜಿನಲ್ಲಿ ವಿಶ್ವಕಪ್ ಕೈ ತಪ್ಪಿಸಬೇಡಿ ಎಂದು ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.