Publish Date: Sat, 13 Jul 2019 (09:12 IST)
Updated Date: Sat, 13 Jul 2019 (09:14 IST)
ಲಂಡನ್: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಮೇಲೂ ಟೀಂ ಇಂಡಿಯಾ ಮ್ಯಾಂಚೆಸ್ಟರ್ ನಲ್ಲಿಯೇ ಉಳಿದುಕೊಂಡಿದ್ದು, ಜುಲೈ 14 ರಂದು ತವರಿಗೆ ಮರಳಲಿದೆ.
ಇದಕ್ಕೆ ಕಾರಣ, ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ತವರಿಗೆ ಮತ್ತು ಅವರು ಬಯಸುವ ತಾಣಗಳಿಗೆ ಟಿಕೆಟ್ ಹೊಂದಿಸಲು ಸಾಧ್ಯವಾಗದೇ ಇರುವುದು. ಹೀಗಾಗಿ ಜುಲೈ 14 ರಂದು ಕೆಲವು ಆಟಗಾರರು ತವರಿಗೆ ಮರಳಲಿದ್ದಾರೆ.
ಟೀಂ ಇಂಡಿಯಾ ಆಟಗಾರರು ಗುಂಪು ಗುಂಪಾಗಿ ತಾವು ಬಯಸುವ ಸ್ಥಳಗಳಿಗೆ ತೆರಳಲಿದ್ದಾರೆ. ಕೆಲವರು ತವರಿಗೆ ಮರಳಿದರೆ ಇನ್ನು ಕೆಲವರು ಕೆಲವು ದಿನಗಳ ರಜಾ ಮಜಾ ಅನುಭವಿಸಲು ಬೇರೆ ಸ್ಥಳಗಳಿಗೆ ಕುಟುಂಬ ಸಮೇತರಾಗಿ ತೆರಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.