ವಿಶ್ವಕಪ್ ಸೋಲಿನ ಬಳಿಕ ಕೋಚ್ ರವಿಶಾಸ್ತ್ರಿ ಜತೆ ವಿರಾಟ್ ಕೊಹ್ಲಿ ಕಿತ್ತಾಟ?!

ಶುಕ್ರವಾರ, 12 ಜುಲೈ 2019 (10:11 IST)
ಲಂಡನ್: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೇರವಾಗಿ ಕೋಚ್ ರವಿಶಾಸ್ತ್ರಿ ಬಳಿ ತೆರಳಿ ಕೂಗಾಡಿದ್ದಾರೆ ಎನ್ನಲಾಗಿದೆ.


ಪಂದ್ಯ ಸೋತ ಬಳಿಕ ರವಿಶಾಸ್ತ್ರಿ ಬಳಿ ವಿರಾಟ್ ಕೂಗಾಡುತ್ತಾ ಬರುವ ವಿಡಿಯೋಗಳು ಕೆಲವೆಡೆ ಹರಿದಾಡುತ್ತಿತ್ತು. ರಿಷಬ್ ಪಂತ್ ಗೆ ಬ್ಯಾಟಿಂಗ್ ನಲ್ಲಿ ಬಡ್ತಿ ನೀಡಿ ಧೋನಿಯನ್ನು 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಲು ಕೊಹ್ಲಿಗೆ ಮನಸ್ಸಿರಲಿಲ್ಲ, ಆದರೆ ರವಿಶಾಸ್ತ್ರಿ ನಿರ್ಣಯದಂತೆ ಹೀಗೆ ಮಾಡಲಾಗಿತ್ತು. ಆದರೆ ಈ ನಿರ್ಧಾರಕ್ಕೆ ಟೀಂ ಇಂಡಿಯಾ ಭಾರೀ ಬೆಲೆ ತೆರಬೇಕಾಯಿತು.

ಇದೆ ಕಾರಣಕ್ಕೆ ಕೋಚ್ ಮೇಲೆ ಕೊಹ್ಲಿ ಕೆಂಡಾಮಂಡಲರಾಗಿದ್ದರು ಎನ್ನಲಾಗಿದೆ. ಹೀಗಾಗಿ ಪಂದ್ಯ ಸೋತ ಹತಾಶೆಯಲ್ಲಿ ನೇರವಾಗಿ ಶಾಸ್ತ್ರಿ ಬಳಿ ಬಂದು ಕೂಗಾಡಿದದರು ಎನ್ನಲಾಗಿದೆ. ಅಂತೂ ಆ ಒಂದು ಸೋಲು ಟೀಂ ಇಂಡಿಯಾವನ್ನು ಕಂಗೆಡಿಸಿರುವುದು ನಿಜ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿವೃತ್ತಿ ಹೇಳಬೇಡ, ದೇಶಕ್ಕೆ ನಿನ್ನ ಅಗತ್ಯವಿದೆ! ಧೋನಿಗೆ ಲತಾ ಮಂಗೇಶ್ಕರ್ ಭಾವನಾತ್ಮಕ ಪತ್ರ