ನಿವೃತ್ತಿ ಹೇಳಬೇಡ, ದೇಶಕ್ಕೆ ನಿನ್ನ ಅಗತ್ಯವಿದೆ! ಧೋನಿಗೆ ಲತಾ ಮಂಗೇಶ್ಕರ್ ಭಾವನಾತ್ಮಕ ಪತ್ರ

ಶುಕ್ರವಾರ, 12 ಜುಲೈ 2019 (09:43 IST)
ಮುಂಬೈ: ಒಂದೆಡೆ ಧೋನಿ ನಿವೃತ್ತಿಯ ಮಾತು ಕೇಳಿಬರುತ್ತಿದ್ದರೆ ಇನ್ನೊಂದೆಡೆ ಅವರ ಅಪ್ಪಟ ಅಭಿಮಾನಿಗಳು ನಿವೃತ್ತಿ ಬೇಡ ಎನ್ನುತ್ತಿದ್ದಾರೆ. ಇದೀಗ ಧೋನಿಗೆ ದೇಶದ  ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್ ಭಾವನಾತ್ಮಕ ಪತ್ರ ಬರೆದು ನಿವೃತ್ತಿ ಹೇಳಬೇಡ ಎಂದು ಮನವಿ ಮಾಡಿದ್ದಾರೆ.


ಸಚಿನ್ ಅಭಿಮಾನಿಯಾಗಿರುವ ಲತಾ ಮಂಗೇಶ್ಕರ್ ಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿಯಿದೆ. ಈಗ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತು ಇಡೀ ದೇಶವೇ ಬೇಸರದಲ್ಲಿದೆ. ಆದರೆ ಸೆಮಿಫೈನಲ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಧೋನಿ ಆಡಿದ ರೀತಿಗೆ ಎಲ್ಲರೂ ಕೊಂಡಾಡುತ್ತಿದ್ದಾರೆ.

ಆದರೆ ತಂಡ ಸೋತ ನಿರಾಸೆಯಲ್ಲಿ ಧೋನಿ ನಿವೃತ್ತಿಯ ನಿರ್ಧಾರ ತೆಗೆದುಕೊಂಡರೆ ಎಂಬ ಆತಂಕ ಅಭಿಮಾನಿಗಳದ್ದು. ಈ ಬಗ್ಗೆ ಧೋನಿಗೆ ಟ್ವಿಟರ್ ಮೂಲಕ ಮನವಿ ಮಾಡಿರುವ ಲತಾ ಮಂಗೇಶ್ಕರ್ ‘ನಮಸ್ಕಾರ ಧೋನಿ. ನೀವು ನಿವೃತ್ತಿಯಾಗಲು ಹೊರಟಿದ್ದೀರಿ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದೆ. ದಯವಿಟ್ಟು ಅಂತಹ ಯೋಚನೆ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ವೈಯಕ್ತಿಕವಾಗಿ ನಾನು ಮನವಿ ಮಾಡುತ್ತೇನೆ, ಅಂತಹ ಯೋಚನೆಗಳನ್ನು ತೆಗೆದುಹಾಕಿ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಸೋಲಿನ ಬಳಿಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವೆ ಮಾತು ಬಂದ್?!