Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಮೊದಲ ಬಾರಿಗೆ ಜಾಗತಿಕ ಕ್ರಿಕೆಟ್ ನ ಚಾಂಪಿಯನ್ ಆಗಲಿರುವ ಇಂಗ್ಲೆಂಡ್-ನ್ಯೂಜಿಲೆಂಡ್!

ವಿಶ್ವಕಪ್ 2019: ಮೊದಲ ಬಾರಿಗೆ ಜಾಗತಿಕ ಕ್ರಿಕೆಟ್ ನ ಚಾಂಪಿಯನ್ ಆಗಲಿರುವ ಇಂಗ್ಲೆಂಡ್-ನ್ಯೂಜಿಲೆಂಡ್!
ಲಂಡನ್ , ಶುಕ್ರವಾರ, 12 ಜುಲೈ 2019 (09:13 IST)
ಲಂಡನ್: ನಿನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ 2 ರಲ್ಲಿ ಆಸ್ಟ್ರೇಲಿಯಾವನ್ನು ಅತಿಥೇಯ ಇಂಗ್ಲೆಂಡ್ 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ಫೈನಲ್ ಗೇರಿದೆ.


ಆ ಮೂಲಕ ಈ ಬಾರಿ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್-ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಇದರಲ್ಲಿ ಯಾವುದೇ ತಂಡ ಪ್ರಶಸ್ತಿ ಗೆದ್ದರೂ ಮೊದಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲಿವೆ. ನಿನ್ನೆ ನಡೆದ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ 49 ಓವರ್ ಗಳಲ್ಲಿ 223 ಕ್ಕೆ ಆಲೌಟ್ ಆಯಿತು. ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ ಇಂಗ್ಲೆಂಡ್‍ 32.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇಂಗ್ಲೆಂಡ್ ಅನೇಕ ವರ್ಷಗಳ ನಂತರ ವಿಶ್ವಕಪ್ ಫೈನಲ್ ತಲುಪಿದರೆ, ನ್ಯೂಜಿಲೆಂಡ್ ಸತತ ಎರಡನೇ ಬಾರಿ ಫೈನಲ್ ಗೇರಿದೆ. ಎರಡೂ ತಂಡಗಳು ಇದುವರೆಗೆ ವಿಶ್ವಕಪ್ ಗೆದ್ದಿರಲಿಲ್ಲ. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಇತಿಹಾಸವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಮೆಸೇಜ್ ಮಾಡಿ ಸಿಕ್ಕಿಬಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ