Publish Date: Sun, 11 Oct 2020 (10:30 IST)
Updated Date: Sun, 11 Oct 2020 (10:32 IST)
ಸಿಡ್ನಿ: ಐಪಿಎಲ್ ಮುಗಿದೊಡನೆ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಲಿರುವ ಟೀಂ ಇಂಡಿಯಾ ಅಲ್ಲಿನ ನಿಯಮಗಳಿಗನುಸಾರವಾಗಿ ಕ್ವಾರಂಟೈನ್ ಅವಧಿ ಪೂರೈಸಲಿದೆ.
ಆಸ್ಟ್ರೇಲಿಯಾದಲ್ಲಿ ವಿದೇಶದಿಂದ ಬಂದವರು ಎರಡು ವಾರಗಳ ಕ್ವಾರಂಟೈನ್ ಅವಧಿ ಪೂರೈಸಬೇಕು. ಆದರೆ ಇದನ್ನು ಕಡಿತಗೊಳಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಗ್ರಹಿಸಿದ್ದರು. ಆದರೆ ಆಸ್ಟ್ರೇಲಿಯಾ ಈ ವಿಚಾರವಾಗಿ ಬಿಸಿಸಿಐ ಮನವೊಲಿಸಿದ್ದು, ಕ್ರಿಕೆಟಿಗರ ಸುರಕ್ಷತೆಗಾಗಿ ಎರಡು ವಾರಗಳ ಸಂಪೂರ್ಣ ಕ್ವಾರಂಟೈನ್ ಅವಧಿ ಪೂರ್ತಿಗೊಳಿಸಬೇಕು ಎಂದಿದೆ. ಈ ವಿಚಾರವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.