Publish Date: Thu, 22 Aug 2019 (09:05 IST)
Updated Date: Thu, 22 Aug 2019 (09:07 IST)
ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದು ಭಾರತಕ್ಕೆ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಸರಣಿಯಾಗಲಿದೆ.
ಮೇಲ್ನೋಟಕ್ಕೆ ನೋಡಿದರೆ ಟೀಂ ಇಂಡಿಯಾವೇ ಪ್ರಬಲ ತಂಡವಾಗಿದೆ. ಈಗಾಗಲೇ ಟಿ20, ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಟೆಸ್ಟ್ ನಲ್ಲೂ ಅದೇ ಪ್ರಾಬಲ್ಯ ಮುಂದುವರಿಸಲಿದೆ.
ಭಾರತ ತಂಡಕ್ಕೆ ಬೌಲಿಂಗ್ ಆಯ್ಕೆಯೇ ತಲೆನೋವಾಗಲಿದೆ. ವೇಗದ ಬೌಲಿಂಗ್ ಆಯ್ಕೆಗೆ ಪ್ರಮುಖ ಪೈಪೋಟಿಯಿದೆ. ಹೀಗಾಗಿ ಅಂತಿಮ ತಂಡದ ಆಯ್ಕೆಯಲ್ಲಿ ಯಾರಿಗೆ ಅದೃಷ್ಟ ಕುದುರುತ್ತದೆ ಎಂದು ನೋಡಬೇಕು. ಐಸಿಸಿ ಆರಂಭಿಸಿರುವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇದು ಭಾರತಕ್ಕೆ ಮೊದಲ ಸರಣಿ. ಈ ನಿಟ್ಟಿನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಹೆಚ್ಚು ಅಂಕ ಸಂಪಾದಿಸುವ ಅನಿವಾರ್ಯತೆಯಲ್ಲಿ ಎಲ್ಲಾ ತಂಡಗಳಿವೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.