ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದುವರೆಗೆ ಚೀನಾ ಮೂಲದ ಒಪ್ಪೊ ಮೊಬೈಲ್ ಕಂಪನಿಯ ಪ್ರಾಯೋಜತ್ವ ಹೊಂದಿತ್ತು. ಆದರೆ ಇದೀಗ ಬದಲಾಗಲಿದೆ.
ಬೆಂಗಳೂರು ಮೂಲದ ಬೈಜು ಲರ್ನಿಂಗ್ ಆಪ್ ಸಂಸ್ಥೆ ಟೀಂ ಇಂಡಿಯಾ ಆಟಗಾರರು ತೊಡುವ ಜೆರ್ಸಿಯ ಪ್ರಾಯೋಜಕತ್ವ ಪಡೆದಿದೆ. ಇನ್ನು ಮುಂದೆ ಕ್ರಿಕೆಟಿಗರ ಜೆರ್ಸಿಯಲ್ಲಿ ಈ ಸಂಸ್ಥೆಯ ಲೋಗೋ ಇರಲಿದೆ.
2017 ರಲ್ಲಿ ಒಪ್ಪೊ ಸಂಸ್ಥೆ 1079 ಕೋಟಿ ರೂ.ಗೆ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಒಪ್ಪೊ ಸಂಸ್ಥೆಗೆ ಈ ದುಬಾರಿ ಮೊತ್ತವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಒಪ್ಪಂದಿಂದ ಹಿಂದೆ ಸರಿದಿದೆ. ಹೀಗಾಗಿ ಬೈಜು ಇದೇ ಮೊತ್ತಕ್ಕೆ ಹೊಸ ಒಪ್ಪಂದ ಮಾಡಿಕೊಂಡಿದೆ.