Publish Date: Thu, 24 Feb 2022 (20:39 IST)
Updated Date: Thu, 24 Feb 2022 (20:40 IST)
ಲಕ್ನೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ-ಇಶಾನ್ ಜೋಡಿ ಅತ್ಯುತ್ತಮ ಆರಂಭ ಒದಗಿಸಿತು. ರೋಹಿತ್ 44 ರನ್ ಗಳಿಸಿ ಔಟಾದರು.
ಆದರೆ ಇಶಾನ್ ಅಬ್ಬರದ ಬ್ಯಾಟಿಂಗ್ ಮುಂದುವರಿಸಿ 56 ಎಸೆತಗಳಿಂದ 89 ರನ್ ಗಳಿಸಿದರು. ಆದರೆ ಶತಕದ ಹೊಸ್ತಿಲಲ್ಲಿ ಎಡವಿ ಬಿದ್ದರು. ಕೊನೆಯಲ್ಲಿ ಅಬ್ಬರಿಸಿದ ಶ್ರೇಯಸ್ ಅಯ್ಯರ್ 57 ರನ್ ಗಳೊಂದಿಗೆ ಅಜೇಯರಾಗುಳಿದರೆ ಸಾಥ್ ನೀಡಿದ ರವೀಂದ್ರ ಜಡೇಜಾ ಅಜೇಯ 3 ರನ್ ಗಳಿಸಿದರು.