Publish Date: Thu, 24 Feb 2022 (08:40 IST)
Updated Date: Thu, 24 Feb 2022 (09:02 IST)
ಲಕ್ನೋ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಈಗಷ್ಟೇ ವಿಂಡೀಸ್ ವಿರುದ್ಧ ದಿಗ್ವಿಜಯ ಸಾಧಿಸಿರುವ ಟೀಂ ಇಂಡಿಯಾಗೆ ಈಗ ಮತ್ತೊಂದು ಸುಲಭ ಎದುರಾಳಿಯ ಮೇಲೆ ಸವಾರಿ ಮಾಡುವ ಅವಕಾಶ.
ಆದರೆ ಈ ಸರಣಿಯಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡಲಿದೆ. ನಾಯಕ ರೋಹಿತ್ ಶರ್ಮಾ ಬಿಟ್ಟರೆ ಬ್ಯಾಟಿಂಗ್ ನಲ್ಲಿ ಯುವ ಆಟಗಾರರದ್ದೇ ಪಾರುಪತ್ಯ.
ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು ಬೌಲಿಂಗ್ ಗೆ ಶಕ್ತಿ ತುಂಬಲಿದ್ದಾರೆ. ಇವರಿಗೆ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಸಾಥ್ ಕೊಡಲಿದ್ದಾರೆ. ಈ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆಯಲಿದ್ದು, ಸಂಜೆ 7 ಗಂಟೆಗೆ ಆರಂಭವಾಗಲಿದೆ.