ಮುಂಬೈ: ಮಹಿಳೆಯರು ಪುರುಷರಿಗೆ ಸರಿಸಮನರಂತೆ ಕ್ರಿಕೆಟ್ ಆಡಬಹುದು. ಆದರೆ ಪುರುಷ ಕ್ರಿಕೆಟಿಗರು ಅನುಭವಿಸದ ಕಷ್ಟವೊಂದನ್ನು ಮಹಿಳೆಯರು ಅನುಭವಿಸಬೇಕಾಗುತ್ತದೆ.
ಈ ಬಗ್ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೆಮಿಮಾ ರೊಡ್ರಿಗಾಸ್ ಸಂದರ್ಶನವೊಂದರಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮುಟ್ಟಿನ ಸಮಯದಲ್ಲಿ ಕ್ರಿಕೆಟ್ ಆಡುವುದು ಮಹಿಳಾ ಆಟಗಾರ್ತಿಯರಿಗೆ ಸವಾಲು. ಆ ಸಮಯದಲ್ಲಿ ನೋವು ನುಂಗುವುದರ ಜೊತೆಗೆ ಬಟ್ಟೆ ಮೇಲೆ ಕಲೆಯಾಗುವ ಭಯವಿರುತ್ತದೆ. ಎಷ್ಟೋ ಆಟಗಾರ್ತಿಯರು ಪಂದ್ಯದಿಂದ ಹೊರಗುಳಿಯುವ ಅವಕಾಶವಿಲ್ಲದೇ ನೋವು ನಿವಾರಕ ನುಂಗಿ ಮೈದಾನಕ್ಕಿಳಿಯುತ್ತಾರೆ. ಇದು ಪುರುಷ ಕ್ರಿಕೆಟಿಗರು ಅನುಭವಿಸದ ಸವಾಲು ಎಂದು ಜೆಮಿಮಾ ಹೇಳಿದ್ದಾರೆ.