Publish Date: Thu, 30 Aug 2018 (17:38 IST)
Updated Date: Thu, 30 Aug 2018 (17:40 IST)
ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆಗೆ ಅತಿಥೇಯ ಇಂಗ್ಲೆಂಡ್ ಕೇವಲ 57 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ ನ ಮೂರನೇ ಓವರ್ ನಲ್ಲೇ ಇಂಗ್ಲೆಂಡ್ ಗೆ ಮೊದಲ ಆಘಾತವಿಕ್ಕಿದರು. ಬಳಿಕ ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತೆರಡು ವಿಕೆಟ್ ಗಳನ್ನು ಪಡೆದರು. ಹೀಗಾಗಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಒಟ್ಟಾರೆ ಬುಮ್ರಾ ಈಗಾಗಲೇ ಎರಡು ವಿಕೆಟ್ ಕಬಳಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚು, ಭಾರತೀಯ ವೇಗಿಗಳ ಶಿಸ್ತಿನ ದಾಳಿ ಹಾಗೂ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಆತ್ಮವಿಶ್ವಾಸವಿಲ್ಲದ ಬ್ಯಾಟಿಂಗ್ ಮೊದಲ ಅವಧಿಯ ಹೈಲೈಟ್ ಆಯಿತು. ಸದ್ಯಕ್ಕೆ ಬೆನ್ ಸ್ಟೋಕ್ಸ್ 12 ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೇರ್ ಸ್ಟೋ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಅವಧಿಯಲ್ಲಿ ಭಾರತ ಇನ್ನೂ ಸ್ಪಿನ್ನರ್ ಅಶ್ವಿನ್ ರನ್ನು ಕಣಕ್ಕಿಳಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.