Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ: ಕ್ಲೈಮ್ಯಾಕ್ಸ್ ಗೆ ಸಜ್ಜಾದ ಜೊಹಾನ್ಸ್ ಬರ್ಗ್

ಭಾರತ-ದ.ಆಫ್ರಿಕಾ: ಕ್ಲೈಮ್ಯಾಕ್ಸ್ ಗೆ ಸಜ್ಜಾದ ಜೊಹಾನ್ಸ್ ಬರ್ಗ್
ಜೊಹಾನ್ಸ್ ಬರ್ಗ್ , ಗುರುವಾರ, 6 ಜನವರಿ 2022 (09:00 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೂರನೇ ದಿನದಂತ್ಯಕ್ಕೆ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಇಂದು ಕ್ಲೈಮ್ಯಾಕ್ಸ್ ನಡೆಯಲಿದೆ.

ನಿನ್ನೆಯ ದಿನದಂತ್ಯಕ್ಕೆ ಭಾರತ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿದ್ದ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇದೀಗ ಆಫ್ರಿಕಾಗೆ ಗೆಲ್ಲಲು 122 ರನ್ ಗಳು ಬೇಕಾಗಿದೆ. ಸದ್ಯಕ್ಕೆ ಡೀನ್ ಎಲ್ಸರ್ 46 ರನ್ ಗಳಿಸಿ ಭಾರತೀಯ ಬೌಲರ್ ಗಳನ್ನು ಕಾಡುತ್ತಿದ್ದಾರೆ.

ಆದರೆ ಆಫ್ರಿಕನ್ನರಿಗೂ ಟೀಂ ಇಂಡಿಯಾ ವೇಗಿಗಳನ್ನು ಎದುರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇದು ವೇಗಿಗಳು ಮತ್ತು ಬ್ಯಾಟರ್ ಗಳ ನಡುವಿನ ಕಾದಾಟವಾಗಿದೆ. ಇಂದಿನ ದಿನದಾಟದಲ್ಲಿ ಭಾರತ ಎಷ್ಟು ಬೇಗ ವಿಕೆಟ್ ಕಬಳಿಸುತ್ತದೋ ಅಷ್ಟು ಬೇಗ ಜಯ ಗಳಿಸಬಹುದು. ಇಲ್ಲದೇ ಹೋದರೆ ಸೋಲೇ ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಶ್ರಾದ್ಧೂಲ್ ಠಾಕೂರ್