Daily Horoscope
✕

ಐಪಿಎಲ್ ನಡುವೆಯೂ ರೋಹಿತ್ ಪಡೆಗೆ ಹೊಸ ಟಾಸ್ಕ್ ನೀಡಲಿರುವ ಬಿಸಿಸಿಐ

Krishnaveni K
ಬುಧವಾರ, 26 ಫೆಬ್ರವರಿ 2025 (16:47 IST)
ಮುಂಬೈ: ಐಪಿಎಲ್ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಾಮಾನ್ಯವಾಗಿ ಬಿಸಿಸಿಐ ಯಾವುದೇ ಜವಾಬ್ಧಾರಿ ನೀಡುವುದಿಲ್ಲ. ಆದರೆ ಈ ಬಾರಿ ಐಪಿಎಲ್ ನಡುವೆಯೂ ಕ್ರಿಕೆಟಿಗರು ಹೊಸ ಟಾಸ್ಕ್ ಗೆ ಸಿದ್ಧವಾಗಬೇಕಿದೆ.

ಐಪಿಎಲ್ ಮಾರ್ಚ್ 22 ರಿಂದ ಮೇ 25 ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಆದರೆ ಇದರ ನಡುವೆಯೂ ಟೀಂ ಇಂಡಿಯಾ ಆಟಗಾರರು ಕೆಂಪು ಚೆಂಡಿನ ಆಟಕ್ಕೆ ಸಿದ್ಧತೆ ನಡೆಸಬೇಕಿದೆ. ಐಪಿಎಲ್ ವೇಳಾಪಟ್ಟಿ ನಡುವೆ ಕೆಲವು ಕೀ ಆಟಗಾರರಿಗೆ ಕೆಂಪು ಚೆಂಡಿನಲ್ಲಿ ಅಭ್ಯಾಸ ಆಯೋಜಿಸಲಾಗುತ್ತದೆ.

ಐಪಿಎಲ್ ಮುಗಿದೊಡನೇ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಬೇಕಾಗುತ್ತದೆ. ಈ ಕಾರಣಕ್ಕೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಐಪಿಎಲ್ ನಡುವೆಯೂ ಟೆಸ್ಟ್ ಪ್ರಾಕ್ಟೀಸ್ ನೀಡಲಿದೆ.

ಇತ್ತೀಚೆಗಿನ ಸರಣಿಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಪರದಾಡುತ್ತಿದ್ದರು. ಇದಕ್ಕೆ ಹಿರಿಯ ಕ್ರಿಕೆಟಿಗರೂ ಹೊರತಾಗಿಲ್ಲ. ಹೀಗಾಗಿ ಆಟಗಾರರಿಗೆ ಟೆಸ್ಟ್ ಸರಣಿಗೆ ವಿಶೇಷ ಅಭ್ಯಾಸ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments