ಚಾಂಪಿಯನ್ಸ್‌ ಟ್ರೋಫಿ ಭದ್ರತಾ ಕಾರ್ಯಕ್ಕೆ ಹಿಂದೇಟು: ಪಾಕ್‌ನಲ್ಲಿ ನೂರಾರು ಪೊಲೀಸರಿಗೆ ಗೇಟ್‌ಪಾಸ್‌

Sampriya
ಬುಧವಾರ, 26 ಫೆಬ್ರವರಿ 2025 (14:40 IST)
Photo Courtesy X
ಲಾಹೋರ್‌: ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ನಡೆಯುತ್ತಿದೆ. ಭದ್ರತೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಪಾಕ್‌ ಸರ್ಕಾರ ಒಂದೊಂದು ಪಂದ್ಯಕ್ಕೂ ಸಾವಿರಾರು ಪೊಲೀಸರನ್ನು ನಿಯೋಜಿಸುತ್ತಿದೆ.

ಪಾಕ್‌ನ ಪೊಲೀಸರಿಗೆ ಈ ಭದ್ರತಾ ಕಾರ್ಯವೂ ತಲೆನೋವು ತಂದಿದೆ. ಹೀಗಾಗಿ, ಹಲವು ಪೊಲೀಸರು  ಭದ್ರತಾ ಕಾರ್ಯಕ್ಕೆ ಹಿಂದೇಟು ಹಾಕಿದ ಬೆನ್ನಲ್ಲೇ ಪಾಕ್‌ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭದ್ರತಾ ಕಾರ್ಯವನ್ನು ಮಾಡಲು ನಿರಾಕರಿಸಿದ ನೂರಕ್ಕೂ ಹೆಚ್ಚು ಪೊಲೀಸರನ್ನು ಸೇವೆಯಿಂದಲೇ ವಜಾಗೊಳಿಸಿದೆ. ಪಾಕಿಸ್ತಾನದ ಪಂಬಾಬ್‌ ಪ್ರಾಂತ್ಯದಲ್ಲಿ ಈ ಬೆಳವಣಿಗೆ ನಡೆಸಿದೆ.

ಕರ್ತವ್ಯದಿಂದ ಬಿಡುಗಡೆಯಾದ ಅಧಿಕಾರಿಗಳು ಹಲವು ಸಂದರ್ಭದಲ್ಲಿ ಗೈರಾಗಿದ್ದರು. ಅಲ್ಲದೇ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಿಸಿದ್ದರು.

ಲಾಹೋರ್‌ನ ಗಡಾಫಿ, ಕರಾಚಿ ಹಾಗೂ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದೆ. ಹಾಗಾಗಿ ಗೊತ್ತುಪಡಿಸಿದ ಹೋಟೆಲ್‌ಗಳಿಗೆ ಪ್ರವಾಣಿಸುವ ತಂಡಗಳಿಗೆ ಭದ್ರತೆ ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಭದ್ರತೆ ಕಾರ್ಯಕ್ಕೆ ಹಲವು ಪೊಲೀಸರು ಹಿಂದೇಟು ಹಾಕಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುವಿನಲ್ಲಿ ಚಿಕಿತ್ಸೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ಡೀಟೈಲ್ಸ್

ಟೀಂ ಇಂಡಿಯಾಗೆ ಮತ್ತೆ ಶುರು ಹರ್ಷಿತ್ ರಾಣಾ ತಲೆನೋವು

Womens World Cup:ಧಾರಾಕಾರ ಮಳೆಗೆ ಕೊಚ್ಚಿ ಹೋದ ಭಾರತ–ಬಾಂಗ್ಲಾದೇಶ ಪಂದ್ಯ

ಮುಂದಿನ ಸುದ್ದಿ
Show comments