ಪ್ರಧಾನಿ ಮೋದಿ ದೀಪ ಬೆಳಗುವ ಕಾರ್ಯಕ್ರಮಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಬೆಂಬಲ

ಭಾನುವಾರ, 5 ಏಪ್ರಿಲ್ 2020 (09:47 IST)
ಮುಂಬೈ: ಕೊರೋನಾ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಬೆಂಬಲಿಸಲು ಪ್ರಧಾನಿ ಮೋದಿ ಇಂದು ರಾತ್ರಿ 9 ಗಂಟೆಗೆ ದೀಪ ಬೆಳಗಲು ಕರೆ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಟೀಂ ಇಂಡಿಯಾದ ಘಟಾನುಘಟಿ ಕ್ರಿಕೆಟಿಗರು ಬೆಂಬಲ ನೀಡಿದ್ದಾರೆ.


ಕ್ರಿಕೆಟಿಗರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಬಹುತೇಕರು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಕರೆ ನೀಡಿರುವ ಈ ಕ್ರಿಕೆಟಿಗರು ಇಂದು 9 ಗಂಟೆಗೆ 9 ನಿಮಿಷ ದೀಪ ಬೆಳಗೋಣ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ. ಮೋದಿ ಜೀ ನಿಮ್ಮ ಜತೆಗೆ ನಾವಿದ್ದೇವೆ ಎಂದು ಕ್ರಿಕೆಟಿಗರು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಹಿತ್ ಶರ್ಮಾ ಪ್ರಕಾರ ಬೆಸ್ಟ್ ಕೋಚ್ ಯಾರು ಗೊತ್ತೇ?