Publish Date: Sun, 05 Apr 2020 (09:30 IST)
Updated Date: Sun, 05 Apr 2020 (09:32 IST)
ಬೆಂಗಳೂರು: ಇಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಲು ಕರೆ ನೀಡಿರುವ ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ಸೂಚಿಸಿದ್ದಾರೆ.
ಕೊರೋನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಧೈರ್ಯ ತುಂಬುವ ಸಲುವಾಗಿ ಎಲ್ಲರೂ ಇಂದು 9 ನಿಮಿಷ ವಿದ್ಯುತ್ ದೀಪ ಆರಿಸಿ ಮೊಬೈಲ್, ಕ್ಯಾಂಡಲ್ ಅಥವಾ ಹಣತೆ ಹಚ್ಚಿ ಎಂದು ಪ್ರಧಾನಿ ಮೊನ್ನೆಯಷ್ಟೇ ಕರೆ ನೀಡಿದ್ದರು.
ಇದಕ್ಕೆ ಬೆಂಬಲ ಸೂಚಿಸಿರುವ ದರ್ಶನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ‘ನಮ್ಮ ಪ್ರಧಾನಿಗಳ ಕರೆಯಂತೆ ಕೊರೋನಾ ವೈರಸ್ ನಿಂದ ಬಂದಿರುವ ಅಂಧಕಾರವನ್ನು ಏಪ್ರಿಲ್ 5 ರಂದು 9 ಗಂಟೆಗೆ 9 ನಿಮಿಷ ನಿಮ್ಮ ಮನೆಯಂಗಳದಿಂದಲೇ ಮೊಂಬತ್ತಿ/ದೀಪ ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ. ಎಲ್ಲಾ ಭಾರತೀಯರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ‍್ಯ. ಮನೆಯಲ್ಲೇ ಭದ್ರವಾಗಿರಿ, ನೆರೆಹೊರೆಯ ಜನರಿಗೆ ಬೆನ್ನುಲುಬಾಗಿರಿ’ ಎಂದು ಬರೆದಿದ್ದಾರೆ.