Select Your Language

Notifications

webdunia
webdunia
webdunia
webdunia

ಒಂದೇ ಒಂದು ಪಂದ್ಯಾವಾಡದೇ ಏಷ್ಯಾ ಕಪ್ ನಲ್ಲಿ ಟೂರ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

Team India

Krishnaveni K

ದುಬೈ , ಸೋಮವಾರ, 29 ಸೆಪ್ಟಂಬರ್ 2025 (11:12 IST)
ದುಬೈ: ಈ ಬಾರಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡದೇ ಅಕ್ಷರಶಃ ಟೂರ್ ಮಾಡಿದ ಕ್ರಿಕೆಟಿಗ ಒಬ್ಬರು ಮಾತ್ರ.

2025 ರ ಏಷ್ಯಾ ಕಪ್ ಪಂದ್ಯಾವಳಿಗೆ ಟೀಂ ಇಂಡಿಯಾ 15 ಸದಸ್ಯರ ಬಳಗವನ್ನು ಘೋಷಿಸಲಾಗಿತ್ತು. ಈ ಪೈಕಿ 13 ಆಟಗಾರರು ಬೇರೆ ಬೇರೆ ಪಂದ್ಯಗಳನ್ನು ಆಡಿದ್ದರು. ಆದರೆ ಇಬ್ಬರು ಆಟಗಾರರಿಗೆ ಮಾತ್ರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ.

ಅವರೆಂದರೆ ಜಿತೇಶ್ ಶರ್ಮಾ. ಬಹುಶಃ ರಿಂಕು ಸಿಂಗ್ ಕೂಡಾ ಇದೇ ಸಾಲಿಗೆ ಸೇರುತ್ತಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ಕೇವಲ ಒಂದೇ ಎಸೆತ ಎದುರಿಸಿದ್ದರು. ಅದೂ ಗೆಲುವಿನ ರನ್ ಆಗಿತ್ತು ಎನ್ನುವುದು ವಿಶೇಷ.

ಆದರೆ ಒಂದೇ ಪಂದ್ಯವನ್ನೂ ಆಡದ ದುರದೃಷ್ಟವಂತನೆಂದರೆ  ಆರ್ ಸಿಬಿ ಪರ ಆಡುವ ಜಿತೇಶ್ ಶರ್ಮಾ. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಇದ್ದ ಕಾರಣ ಜಿತೇಶ್ ಶರ್ಮಾಗೆ ಅವಕಾಶವೇ ಸಿಗಲಿಲ್ಲ. ಜಿತೇಶ್ ಕೂಡಾ ಟಿ20 ಶೈಲಿಗೆ ಹೇಳಿ ಮಾಡಿಸಿದ ಆಟಗಾರ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರೂ ಒಂದೇ ಪಂದ್ಯವಾಡದೇ ಏಷ್ಯಾ ಕಪ್ ಮುಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಗೆದ್ದ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡ ಸೂರ್ಯಕುಮಾರ್ ಯಾದವ್