Publish Date: Sun, 26 Dec 2021 (15:42 IST)
Updated Date: Sun, 26 Dec 2021 (15:47 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಉತ್ತಮ ಬ್ಯಾಟಿಂಗ್ ನಡೆಸಿದೆ.
ಮೊದಲ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 83 ರನ್ ಗಳಿಸಿದೆ. ಆರಂಭಿಕರಾದ ಕೆಎಲ್ ರಾಹುಲ್ 29, ಮಯಾಂಕ್ ಅಗರ್ವಾಲ್ 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ನಡುವೆ 36 ರನ್ ಗಳಿಸಿದ್ದಾಗ ಮಯಾಂಕ್ ಅಗರ್ವಾಲ್ ಗೆ ಜೀವದಾನವೂ ಸಿಕ್ಕಿತು. ರಾಹುಲ್ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರೆ ಮಯಾಂಕ್ ಹೊಡೆತಗಳಿಗೆ ಕೈ ಹಾಕಿದರು. ಇಬ್ಬರ ಉತ್ತಮ ಆಟದಿಂದಾಗಿ ಭಾರತ ವಿಕೆಟ್ ನಷ್ಟವಿಲ್ಲದೇ ಭೋಜನ ವಿರಾಮಕ್ಕೆ ತೆರಳಿದೆ.