Select Your Language

Notifications

webdunia
webdunia
webdunia
webdunia

ಟಾಸ್ ಗೆದ್ದ ಟೀಂ ಇಂಡಿಯಾಗೆ ಕುಚಿಕು ಗೆಳೆಯರ ಆರಂಭ

ಟಾಸ್ ಗೆದ್ದ ಟೀಂ ಇಂಡಿಯಾಗೆ ಕುಚಿಕು ಗೆಳೆಯರ ಆರಂಭ
ಸೆಂಚೂರಿಯನ್ , ಭಾನುವಾರ, 26 ಡಿಸೆಂಬರ್ 2021 (13:42 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂ‍ಗ್ ಆಯ್ದುಕೊಂಡಿದೆ.

ಈ ಪಂದ್ಯದಲ್ಲಿ ಕರ್ನಾಟಕ ಮೂಲದ ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಬಹಳ ದಿನಗಳ ನಂತರ ಕುಚಿಕು ಗೆಳೆಯರು ಆರಂಭಿಕರಾಗಿದ್ದಾರೆ.

ಭಾರತ ಈ ಪಂದ್ಯದಲ್ಲಿ ಶ್ರೇಯಸ್ ಐಯರ್ ರನ್ನು ಹೊರಗಿಟ್ಟು ಅನುಭವಿ ಅಜಿಂಕ್ಯಾ ರೆಹಾನೆಗೇ ಮಣೆ ಹಾಕಿದೆ. ಪೂಜಾರ ಕೂಡಾ ತಂಡದಲ್ಲಿದ್ದಾರೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಕಣಕ್ಕಿಳಿದಿದ್ದಾರೆ. ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾದಲ್ಲಿ ರವಿಚಂದ್ರನ್ ಅಶ್ವಿನ್ ಏಕೈಕ ಸ್ಪಿನ್ನರ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಎದುರು ಹಾಕಿಕೊಂಡ ಕೊಹ್ಲಿಗಿದೆ ಭಾರೀ ಒತ್ತಡ